ಪಂಜಾಬ್​:ಇಲ್ಲಿನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಕ್ಷೇತ್ರ ಗೋಲ್ಡನ್ ಟೆಂಪಲ್​​ ಒಳಕ್ಕೆ ನುಗ್ಗಿದ್ದಲ್ಲದೆ, ಅದರ ಪಾವಿತ್ರ್ಯಕ್ಕೆ ಧಕ್ಕೆ ತರಲು ಯತ್ನಿಸಿದವ ಹೆಣವಾಗಿ ಹೋಗಿದ್ದಾನೆ. ಇಂಥದ್ದೊಂದು ಘಟನೆ ಇಂದು ಸಂಜೆಯ ಸುಮಾರಿಗೆ ಇಲ್ಲಿ ನಡೆದಿದೆ.
ಗೋಲ್ಡನ್ ಟೆಂಪಲ್ ಎಂದೂ ಕರೆಯಲಾಗುವ ಈ ದರ್ಬಾರ್ ಸಾಹಿಬ್​ ಒಳಕ್ಕೆ ಎಂದಿನಂತೆ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭದಲ್ಲಿ ಯುವಕನೊಬ್ಬ ಇದ್ದಕ್ಕಿದ್ದಂತೆ ನುಗ್ಗಿದ್ದಲ್ಲದೆ ಸಿಖ್ಖರ ಪವಿತ್ರ ಗ್ರಂಥ ಗ್ರಂಥ್​ ಸಾಹಿಬ್​ಅನ್ನು ಗೋಲ್ಡನ್​ ಕಿರ್ಪನ್​ನಿಂದ ಹೊಡೆದಿದ್ದಾನೆ. ಈತನ ದಾಳಿಯ ಕೆಲ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ:ಚಳಿಗಾಲದ ಅಧಿವೇಶನದಲ್ಲಾಗಲಿದೆ ‘ಮಂಡೇ’ಬಿಸಿ: ಸದನದಲ್ಲಿ ಕೋಲಾಹಲ ಎಬ್ಬಿಸಲಿದೆ ಮತಾಂತರ ನಿಷೇಧ ವಿಧೇಯಕ!
ಯುವಕ ನುಗ್ಗಿ ದಾಂಧಲೆ ನಡೆಸುತ್ತಿದ್ದ ಬೆಚ್ಚಿಬಿದ್ದ ಕೆಲವರು ದಿಕ್ಕಾಪಾಲಾಗಿ ಓಡಿದರೂ ಕೆಲವೇ ಕ್ಷಣಗಳಲ್ಲಿ ಮಂದಿರದ ಒಳಗಿದ್ದ ಜನರು ಆತನನ್ನು ಸುತ್ತುವರಿದಿದ್ದರು. ಬಳಿಕ ಆತನನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ (ಎಸ್​ಜಿಪಿಸಿ) ಅವರು ವಶಕ್ಕೆ ಪಡೆದು, ಎಸ್​ಜಿಪಿಸಿ ಹೆಡ್​ಕ್ವಾರ್ಟರ್ಸ್​ಗೆ ಕರೆದೊಯ್ದಿದ್ದರು. ಬಳಿಕ ಆತನನ್ನು ಸಾಯುವಂತೆ ಹೊಡೆಯಲಾಗಿದೆ ಎನ್ನಲಾಗಿದ್ದು, ನಂತರ ಆತನ ಶವವನ್ನು ಎಸ್​ಜಿಪಿಸಿ ಗೇಟ್ ಬಳಿ ಇಡಲಾಗಿತ್ತು.

ಒಂದೇ ವಾರದಲ್ಲಿ ಮತ್ತೆ 30 ದೇಶಗಳಿಗೆ ವ್ಯಾಪಿಸಿದ ಒಮಿಕ್ರಾನ್​, ಮೂರೇ ದಿನಗಳೊಳಗೆ ದುಪ್ಪಟ್ಟಾಗುತ್ತಿರುವ ಸೋಂಕು!

ಅಜ್ಜಿಯೊಂದಿಗೆ ಫ್ಲ್ಯಾಟ್​ ನೋಡಲು ಹೋಗಿದ್ದ 2 ವರ್ಷದ ಬಾಲಕ ಐದನೇ ಮಹಡಿಯಿಂದ ಬಿದ್ದು ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
