ಗ್ರೇಟರ್​ ನೋಯ್ಡಾ:ವ್ಯಕ್ತಿಯೊಬ್ಬ ತನ್ನ ಎಸ್‌ಯುವಿ ಕಾರಿನ ಹೆಸರಿನ ಹಿಂದೆ ‘ಸರ್’​ ಮತ್ತು ಮುಂದೆ ‘ಜಿ’ ಎಂದು ಬರೆಸಿಕೊಂಡಿದ್ದು, ಈ ದೃಶ್ಯ ನಗರದ ಸಂಚಾರಿ ಪೊಲೀಸರ ಗಮನಕ್ಕೆ ಬಂದ ಕೂಡಲೇ ಪೊಲೀಸರು ದಂಡ ವಿಧಿಸಿದ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಶೆಫ್​ ಚಿದಂಬರನ ಅಡುಗೆ ಪೂರ್ಣ! ಪ್ಯಾಕಪ್ ಆಯಿತು ಅನಿರುದ್ಧ್, ನಿಧಿ ಸುಬ್ಬಯ್ಯ, ರೇಚೆಲ್ ಸಿನಿಮಾ
ತಮ್ಮ ಎಸ್‌ಯುವಿ ಟಾಟಾ ಪಂಚ್‌ ಕಾರಿನ ಹೆಸರಿಗೆ ‘ಸರ್’ ಮತ್ತು ‘ಜಿ’ ಎಂದು ಸೇರಿಸಿದ್ದಾನೆ. ಇದು ‘ಸರ್​ಪಂಚ್​ಜಿ’ ಎಂಬ ಅರ್ಥವನ್ನು ಕೊಟ್ಟಿದೆ. ವ್ಯಕ್ತಿಯ ಕಾರಿನ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸಂಚಾರಿ ಪೊಲೀಸರು ಈ ಬಗ್ಗೆ ಗಮನಹರಿಸಿದ್ದು, ಚಲನ್​ ಮೂಲಕ ದಂಡ ವಿಧಿಸಿದ್ದಾರೆ.
ಇದರೊಟ್ಟಿಗೆ ಕಾರಿನ ಹಿಂಭಾಗದ ಬಲಭಾಗದಲ್ಲಿ ‘ಗುರ್ಜರ್’ ಎಂದು ಹಿಂದಿಯಲ್ಲಿ ಬರೆಸಲಾಗಿದೆ. ಈ ಪದವು ಜಾತಿಯನ್ನು ಬಿಂಬಿಸಿದೆ. ಎಸ್​ಯುವಿ ಕಾರಿನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಗ್ರೇಟರ್ ನೋಯ್ಡಾ ಟ್ರಾಫಿಕ್ ಪೊಲೀಸ್ ಇಲಾಖೆ ಈ ಕುರಿತಂತೆ ಕ್ರಮ ಕೈಗೊಂಡಿದೆ.
ಇದನ್ನೂ ಓದಿ:ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಬೆಂಗಳೂರು ವಿಭಾಗದ ಪ್ರಾಬಲ್ಯ
ಸಂದೀಪ್ ಭಾಟಿ ಎಂದು ಗುರುತಿಸಲಾದ ಕಾರು ಮಾಲೀಕನ ವಿರುದ್ಧ ಇದೀಗ 500 ರೂ.ಗಳ ಚಲನ್ ಜಾರಿಗೊಳಿಸಿದ್ದು, ಗಮನಾರ್ಹವಾಗಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾತಿ ಆಧಾರಿತ ಮತ್ತು ಧರ್ಮವನ್ನು ಬಳಸದಂತೆ ಜನರಿಗೆ ಆದೇಶ ನೀಡಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).
ಸ್ಯಾಂಡಲ್​ವುಡ್​ನಲ್ಲಿ ವಿನೂತನ ಪ್ರಯತ್ನ; ಸೈ-ಫೈ ಚಿತ್ರದ ‘ಸಖಿ’ ಲಿರಿಕಲ್ ಹಾಡು ರಿಲೀಸ್​ ಮಾಡಿದ ಸ್ಟಾರ್​ ನಟಿಯರು!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − ten =
Remember me
