ಮುಂಬೈ:ಪ್ರೀತಿಯಿಂದ ಸಾಕಿದ್ದ ತಂಗಿಗೆ ಆಕೆಯ ಮಾಜಿ ಪ್ರೇಮಿ ಕಿರುಕುಳ ನೀಡುತ್ತಿದ್ದಾನೆ ಎನ್ನುವ ಕಾರಣಕ್ಕೆ ಅಣ್ಣ ಕಾನೂನನ್ನು ಕೈಗೆ ತೆಗೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಆತನ ಹೊಟ್ಟೆಯೊಳಗಿತ್ತು 4 ಕೋಟಿ ಮೌಲ್ಯದ ಡ್ರಗ್ಸ್​! ಕಳ್ಳಸಾಗಣೆಗೆ ಬೇರೆಯದ್ದೇ ಮಾರ್ಗ ಕಂಡುಕೊಂಡ ಕದೀಮರು!
ಥಾಣೆಯ ದೀಪಕ್​ ಮಹಂಕಲ್​ ಹೆಸರಿನ ಆರೋಪಿಯ ತಂಗಿ ಮಂಗೇಶ್​ ಕೇದಾರ್​ ಹೆಸರಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಬಂದಿದ್ದು ಪ್ರೀತಿ ಮುರಿದುಬಿದ್ದಿದೆ. ಅಷ್ಟಾದರೂ ಮಂಗೇಶ್​ ಯುವತಿಯನ್ನು ಸುಮ್ಮನೆ ಬಿಟ್ಟಿಲ್ಲ. ಆಗಾಗ ಕರೆ ಮಾಡಿ ಕಿರುಕುಳ ನೀಡುತ್ತಿದ್ದನಂತೆ. ಈ ರೀತಿ ಮಂಗೇಶ್​ ತನ್ನ ತಂಗಿಗೆ ಕಾಡಿಸುತ್ತಿರುವ ವಿಚಾರ ದೀಪಕ್​ಗೆ ತಿಳಿದುಬಂದಿದೆ. ಮಂಗೇಶ್​ಗೆ ಬುದ್ಧಿ ಕಲಿಸುವ ನಿರ್ಧಾರವನ್ನು ಆತ ಮಾಡಿದ್ದಾನೆ.
ಮಂಗೇಶ್​ ಡಿಸೆಂಬರ್​ 31ರಂದು ಕುಟುಂಬದೊಂದಿಗೆ ಇರದೆ ತನ್ನ ಇನ್ನೊಂದು ಮಲಗುವ ನಿರ್ಧಾರ ಮಾಡಿದ್ದು, ಅಲ್ಲಿಗೆ ಹೋಗಿದ್ದಾನೆ. ಆ ದಿನದಂದು ಹೊಂಚು ಹಾಕಿ ಮಂಗೇಶ್​ನ ಹಿಂದೆ ಹೋದ ದೀಪಕ್​ ಕಲ್ಲಿನಿಂದ ಆತನಿಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಅಲ್ಲಿಂದ ಮನೆಗೆ ವಾಪಾಸು ಬಂದಿದ್ದಾನೆ. ಇತ್ತ ಮಂಗೇಶ್​ ಎಷ್ಟು ಹೊತ್ತಾದರೂ ಮನೆಗೆ ವಾಪಾಸು ಬರದಿದ್ದನ್ನು ಕಂಡು ಗಾಬರಿಗೊಂಡ ಕುಟುಂಬ ಮತ್ತೊಂದು ಮನೆಗೆ ತೆರಳಿ ನೋಡಿದಾಗ ಅಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ.
ಇದನ್ನೂ ಓದಿ:ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: 200 ಕ್ವಿಂಟಾಲ್ ಜೋಳ ಸುಟ್ಟ ದುಷ್ಕರ್ಮಿಗಳು
ಕೊಲೆ ಮಾಡಿ ಬಂದ ದೀಪಕ್​ ಸುಮ್ಮನೆ ಕುಳಿತಿಲ್ಲ. ನಾನು ಕೊಲೆ ಮಾಡಿದೆ, ಇನ್ನು ನನ್ನ ತಂಗಿಗೆ ತೊಂದರೆಯಿಲ್ಲ ಎಂದು ನೆರೆಮನೆಯರ ಬಳಿ ಹೇಳಿಕೊಂಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಲು ನೋಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ದೀಪಕ್​ ಬಳಿ ಬಂದಿದ್ದು, ಆತನನ್ನು ಬಂಧಿಸಿ ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾರೆ. (ಏಜೆನ್ಸೀಸ್​)
ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
