ಲಖನೌ:ಮದುವೆಯಾಗಿ ಮೂರು ವರ್ಷಗಳಾದರೂ ಹೆಂಡತಿ ಮಡಿಲು ತುಂಬಿಸಿಕೊಳ್ಳಲಿಲ್ಲ, ಮಗುವನ್ನು ಹೆರಲಿಲ್ಲ ಎನ್ನುವ ಕಾರಣಕ್ಕೆ ಗಂಡನೇ ಆಕೆಯನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆಗೆ ಆತ ವರದಕ್ಷಿಣೆ ಕಿರುಕುಳವನ್ನೂ ನೀಡುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಅಜ್ಜಿ ತಲೆಯನ್ನು ಸುತ್ತಿಗೆಯಿಂದ ಜಜ್ಜಿ ಕೊಂದ ಮೊಮ್ಮಗ! ಕಾರಣವೇನು ಗೊತ್ತಾ?
ಪ್ರೀತಿ ಹೆಸರಿನ ಯುವತಿಯನ್ನು ಮೂರು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬಿಜ್ನೋರ್​ನ ಮುಕಾರ್ಪುರಿ ಗ್ರಾಮದ ನಿವಾಸಿ ರೋಹಿತ್​ ಕುಮಾರ್​ಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ಸಮಯದಲ್ಲಿ ಪ್ರೀತಿಯ ತಂದೆ ತಾಯಿ, ವರನ ಕುಟುಂಬಕ್ಕೆ ತಮ್ಮ ಕೈಲಾದಷ್ಟು ವರದಕ್ಷಿಣೆ ನೀಡಿದ್ದರು. ಆದರೆ ಅದು ಸಾಕಾಗಿಲ್ಲ ಎಂದು ವರನ ಕುಟುಂಬ ಮದುವೆಯಾದ ಮೇಲೆ ಪ್ರೀತಿಗೆ ಹಿಂಸೆ ನೀಡಲು ಆರಂಭಿಸಿದೆ. ಆಗಾಗ ಆಕೆಯ ಮೇಲೆ ಹಲ್ಲೆ ಮಾಡಿರುವುದಾಗಿಯೂ ಹೇಳಲಾಗಿದೆ.
ಇದನ್ನೂ ಓದಿ:ಸ್ಯಾಂಡಲ್​ವುಡ್​ಗೆ ಟಿಕ್​ಟಾಕ್​ ಸ್ಟಾರ್​ ಸೋನು ಶ್ರೀನಿವಾಸ ಗೌಡ ಎಂಟ್ರಿ! ಅದ್ವಿತಿ ಶೆಟ್ಟಿ, ಧರ್ಮ ಕೀರ್ತಿರಾಜ್​ ಜತೆ ಸ್ಕ್ರೀನ್​ ಶೇರ್​
ಮದುವೆಯಾಗಿ ಮೂರು ವರ್ಷಗಳಾದರೂ ಪ್ರೀತಿಗೆ ಗರ್ಭ ನಿಂತಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೋಹಿತ್​ ಆಕೆಯ ಕೊಲೆ ಮಾಡಿದ್ದಾನೆ. ಇದಕ್ಕೆ ಆತನ ತಂದೆ ತಾಯಿಯೂ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಪ್ರೀತಿಯ ತಂದೆ ತಾಯಿ, ಅಳಿಯನ ಮನೆಗೆ ಹೋದಾಗ, ಮಗಳ ದೇಹ ಕೋಣೆಯ ಬೆಡ್​ನ ಮೇಲಿತ್ತು. ಆಕೆಯ ಕುತ್ತಿಗೆಯಲ್ಲಿ ಹಗ್ಗವಿದ್ದು, ಇದನ್ನು ಆತ್ಮಹತ್ಯೆ ಎಂದು ನಂಬಿಸುವ ಸಲುವಾಗಿ ಹಗ್ಗದ ಇನ್ನೊಂದು ತುದಿಯನ್ನು ಫ್ಯಾನ್​ಗೆ ಕಟ್ಟಲಾಗಿತ್ತು ಎನ್ನಲಾಗಿದೆ. ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯ ಕುಟುಂಬ ದೂರು ನೀಡಿದ್ದು, ಇದೀಗ ಆಕೆಯ ಗಂಡನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)
ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 12 =
Remember me
