ಸೂರತ್​:ಜೀವನಪರ್ಯಂತ ಜತೆಯಿರುವುದಾಗಿ ಪ್ರಮಾಣ ಮಾಡಿ ಮದುವೆಯಾದ ಪತ್ನಿಯನ್ನೇ ಪತಿ ಕೊಂದು, ಶವದ ಜತೆ ಮಲಗಿದ ಘಟನೆ ಗುಜರಾತ್​ನಲ್ಲಿ ನಡೆದಿದೆ. ಪತ್ನಿಯನ್ನು ಕೊಂದ ಆತ ಮಾರನೇ ದಿನ ಏನೂ ಆಗೇ ಇಲ್ಲವೆನ್ನುವಂತೆ ಮನೆ ಬಿಟ್ಟು ತೆರಳಿದ್ದ ಎನ್ನಲಾಗಿದೆ.
ಇದನ್ನೂ ಓದಿ:ಪಂಜಾಬಿಗರಿಗಾಗಿ ಹೃದಯ ಮಿಡಿಯುತ್ತೆ! ರೈತರ ಹೋರಾಟದ ಬಗ್ಗೆ ಮಾತನಾಡಿದ ಪಾಕ್​ ಸಚಿವ
ಕೇದ್ಬಾರಾಮದ ಲಿಖರಾಮ್ ಅಲಿಯಾಸ್ ಲಕ್ಷ್ಮಣ್ ಕೇಶರಾಮ್ ಚೌಧರಿ ಕೆಲ ವರ್ಷಗಳ ಹಿಂದೆ ಏಜೆಂಟ್​ ಒಬ್ಬರ ಮೂಲಕ ವಧು ಹುಡುಕಿ, ಮದುವೆಯಾಗಿದ್ದ. ಇದಕ್ಕೆಂದು ಆತ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದನಂತೆ. ಆದರೆ ಮದುವೆಯಾದ ಮೇಲೆ ಆತನ ಬದುಕು ಅವನೆಂದುಕೊಂಡಂತಿರಲಿಲ್ಲ. ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಲಿಖರಾಮ್​ ಡಿಸೆಂಬರ್​ 4ರಂದು ಪತ್ನಿಯನ್ನು ಕೊಂದಿದ್ದಾನೆ. ಆಕೆಯ ಶವವನ್ನು ಗೋನಿ ಚೀಲದೊಳಗೆ ತುಂಬಿದ್ದಾನೆ. ಪೂರ್ತಿ ರಾತ್ರಿ ಹೆಣದೊಂದಿಗೆ ಮಲಗಿ ಕಾಲ ಕಳೆದಿದ್ದಾನೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಕಿಡಿಗೇಡಿಗಳಿಂದ ದಾಳಿಯ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಎದುರಾಯ್ತು ಮತ್ತೊಂದು ಸಮಸ್ಯೆ!
ಎಂದಿನಂತೆ ಬೆಳಗ್ಗೆ ಎದ್ದ ಲಿಖರಾಮ್​ ಮನೆಯಿಂದ ಹೊರಟು ತನ್ನ ತರಕಾರಿ ಗಾಡಿಯನ್ನು ತಳ್ಳಿಕೊಂಡು ಹೊರಟಿದ್ದಾನೆ. ನಗರದಿಂದ 140 ಕಿ.ಮೀ ದೂರದಲ್ಲಿರುವ ಅಹಮದಾಬಾದ್​ವರೆಗೆ ಗಾಡಿಯನ್ನು ತಳ್ಳಿಕೊಂಡು ಹೋಗಿ ಅಲ್ಲಿ ಅದನ್ನು ಮಾರಾಟ ಮಾಡಿದ್ದಾನೆ. ನಂತರ ಬಸ್ ಒಂದರ ಮೂಲಕ ಸಬರ್​ಕಥಾಕ್ಕೆ ಹೊರಟಿದ್ದಾನೆ. ಅಷ್ಟರೊಳಗೆ ಪ್ರಕರಣವನ್ನು ಭೇದಿಸಿದ ಪೊಲೀಸರು ಲಿಖರಾಮ್​ಗಾಗಿ ಬಲೆ ಬೀಸಿದ್ದಾರೆ. ಇದೀಗ ಆತನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)
ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − one =
Remember me
