ಮುಂಬೈ:ಹೋಟೆಲ್​ ಒಂದರಲ್ಲಿ ಕುಳಿತಿದ್ದ ಮಹಿಳೆ ಟಾಯ್ಲೆಟ್​ ಬಳಸಲೆಂದು ಟಾಯ್ಲೆಟ್​ಗೆ ಹೋದಾಗ ತನ್ನ ಕರಾಮತ್ತು ತೋರಲು ಮುಂದಾದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಮಗಿಳೆ ವಹಿಸಿದ ಮುಂಜಾಗ್ರತೆಯಿಂದಾಗಿ ಆಕೆಯ ಮಾನ ಉಳಿದಿದೆ.
ಇದನ್ನೂ ಓದಿ:ಬ್ರಿಟನ್​ ದಂಪತಿಯ ಹಣದಾಸೆಗೆ ಬಲಿಯಾಯಿತು ಭಾರತದ ಕೂಸು! ದತ್ತು ಪಡೆದ ದಂಪತಿ ಹೀಗಾ ಮಾಡೋದು?
ಮಹಾರಾಷ್ಟ್ರದ ಮುಂಬೈನಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಹೋಟೆಲ್​ ಬಳಿಯಲ್ಲೇ ಸಣ್ಣದೊಂದು ಮೊಬೈಲ್​ ಅಂಗಡಿ ಇಟ್ಟುಕೊಂಡಿದ್ದ ಸಮೀರ್​ ಹಮೀದ್​ ಶೈಖ್​ ಶೌಚಕ್ಕೆ ಹೋಟೆಲ್​ನ ಟಾಯ್ಲೆಟ್​ನ್ನೇ ಬಳಸುತ್ತಿದ್ದ. ಆ ದಿನ ಕೂಡ ಅದೇ ರೀತಿ ಟಾಯ್ಲೆಟ್​ಗೆಂದು ಹೋಟೆಲ್​ಗೆ ತೆರಳಿದ್ದಾನೆ. ಆ ವೇಳೆ ಅಲ್ಲಿ ಊಟ ಮಾಡುತ್ತಿದ್ದ 30 ವರ್ಷದ ಮಹಿಳೆಯೊಬ್ಬಳು, ಟಾಯ್ಲೆಟ್​ ಬಳಸಲು ಎದ್ದು ಬಂದಿದ್ದಾಳೆ. ಆಕೆ ಟಾಯ್ಲೆಟ್​ ಒಳಗಿದ್ದಾಗ ಸಮೀರ್​ ತನ್ನ ಕೈ ಚಳಕ ತೋರಿಸಲು ಮುಂದಾಗಿದ್ದಾನೆ.
ಇದನ್ನೂ ಓದಿ:78 ವರ್ಷ ವಯಸ್ಸಾದರೂ ಕಡಿಮೆಯಾಗದ ಹುಮ್ಮಸ್ಸು! ಇಳಿವಯಸ್ಸಿನಲ್ಲಿ ಪಂಚಾಯಿತಿಗೆ ಆಯ್ಕೆಯಾದ ಲಕ್ಷ್ಮಮ್ಮ
ಟಾಯ್ಲೆಟ್​ನ ಬಾಗಿಲ ಕೆಳಗೆ ಮೊಬೈಲ್​ ಇಟ್ಟು ಚಿತ್ರೀಕರಿಸಲು ಸಮೀರ್​ ಪ್ರಯತ್ನಿಸಿದ್ದಾನೆ. ಆದರೆ ಅದನ್ನು ಗಮನಿಸಿದ ಮಹಿಳೆ ಜೋರಾಗಿ ಚೀರಿಕೊಂಡಿದ್ದಾಳೆ. ತಕ್ಷಣ ಹೋಟೆಲ್​ ಸಿಬ್ಬಂದಿಗಳು ಬಂದಿದ್ದು, ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಈ ವಿಚಾರವಾಗಿ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಹೋಟೆಲ್​ ಸಿಸಿಟಿವಿಯ ದೃಶ್ಯಾವಳಿಗಳ ಸಹಾಯದಿಂದ ಸಮೀರ್​ನನ್ನು ಗುರುತಿಸಲಾಗಿದ್ದು, ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
