ತಮಿಳುನಾಡು:ಇದು ಸಾಯಿಸಲು ಹೋದವ ತಾನೇ ಸಾವಿಗೀಡಾದಂಥ ಪ್ರಕರಣ. ಇದರಲ್ಲಿ ಆತನಿಗೆ ಜೊತೆಯಾಗಿ ಹೋಗಿದ್ದ 5 ನಾಯಿಗಳೂ ಪ್ರಾಣ ಕಳೆದುಕೊಂಡಿವೆ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಬೇಟೆಗೆಂದು ಹೋಗಿದ್ದವ ತನ್ನ ಐದು ನಾಯಿಗಳೊಂದಿಗೆ ಸಾವಿಗೀಡಾಗಿದ್ದಾನೆ.
ಮಣಿಕ್ಕಂ (35) ಸಾವಿಗೀಡಾದ ಬೇಟೆಗಾರ. ಈತ ತನ್ನ ಕುಪ್ಪುಸ್ವಾಮಿ (29), ಆರ್. ಮನೋಜ್​ (27) ಎಂಬವರೊಂದಿಗೆ ಬೇಟೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಮಧುರೈ ಜಿಲ್ಲೆಯ ಅರಂಗನಲ್ಲೂರು ಎಂಬಲ್ಲಿ ಈ ದುರಂತ ಸಂಭವಿಸಿದೆ.
ಈ ಮೂವರು ಭಾನುವಾರ ಮೊಲಗಳನ್ನು ಬೇಟೆಯಾಡಲೆಂದು ಐದು ನಾಯಿಗಳೊಂದಿಗೆ ಹೋಗಿದ್ದರು. ಆದರೆ ಹೊಲವೊಂದರ ಸುತ್ತ ಹಾಕಿದ್ದ ವಿದ್ಯುತ್ ತಂತಿಯ ಬೇಲಿಯಿಂದ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ವಿದ್ಯುತ್​ ಬೇಲಿ ಹಾಕಿದ್ದ ಹೊಲದ ಮಾಲೀಕ ಅಶೋಕ್ ಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಣಿಕ್ಕಂ ಆಗಾಗ ಸ್ನೇಹಿತರೊಂದಿಗೆ ಬೇಟೆಗೆ ಹೋಗುತ್ತಿದ್ದುದು ಬೆಳಕಿಗೆ ಬಂದಿದ್ದು, ಈ ಸಲ ಅಕ್ರಮ ವಿದ್ಯುತ್ ಬೇಲಿಗೆ ಬಲಿಯಾಗಿದ್ದಾನೆ.
ಮೋದಿ-ಯೋಗಿ ಬಿಟ್ಟರೆ ಇನ್ಯಾರು?; 25 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳೇ ಅಭ್ಯರ್ಥಿಗಳು!
ಭೀಕರ ಅಪಘಾತ: 30ಕ್ಕೂ ಅಧಿಕ ಪ್ರಯಾಣಿಕರಿದ್ದ ಬಸ್ ಪಲ್ಟಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 1 =
Remember me
