ಮುಂಬೈ:ಮಾರಕ COVID-19 ಕಾಯಿಲೆ ಹೆಚ್ಚಾಗುತ್ತಿದ್ದಂತೆ ಅದನ್ನು ಗುಣಪಡಿಸಲಾಗುತ್ತದೆ ಎನ್ನಲಾಗುವ ಚುಚ್ಚುಮದ್ದು, ಮಾತ್ರೆಗಳು, ಔಷಧಿಗಳ ಕಾಳ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.COVID ಚುಚ್ಚುಮದ್ದನ್ನು ಮೂಲ ಬೆಲೆಗಿಂತ ಮೂರು ಪಟ್ಟು ಮಾರಾಟ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು 30 ವರ್ಷದ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.ಉತ್ತರಾಖಂಡ ನಿವಾಸಿ ಅಜಮ್ ನಾಸಿರ್ ಆರೋಪಿ ಎಂದು ಗುರುತಿಸಲಾಗಿದೆ.ನಾಸಿರ್, COVID-19 ಗುಣಮುಖಪಡಿಸುತ್ತದೆ ಎಂದು ಹೇಳಲಾದ ಆಕ್ಟೇಮ್ರಾ 400 ಎಂಜಿ ಅಥವಾ ಟೊಸಿಲಿಜುಮಾಬ್ ಇಂಜೆಕ್ಷನ್ ಅನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದ. ಆತನನ್ನು ಮುಂಬೈ ಅಪರಾಧ ವಿಭಾಗ ಘಟಕ 9 ಮಂಗಳವಾರ ಬಂಧಿಸಿದೆ.ಪೊಲೀಸರ ಪ್ರಕಾರ, ಆರೋಪಿ ದೆಹಲಿಯಲ್ಲಿ ಸೈನ್ ಬೋರ್ಡ್ ವ್ಯವಹಾರವನ್ನು ಮಾಡುತ್ತಿದ್ದಾನೆ. ಏತನ್ಮಧ್ಯೆ, ಲಾಕ್ ಡೌನ್ ಆದ ಕಾರಣ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್​​ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದ.
ಇದನ್ನೂ ಓದಿ:ಒಂದು ಗ್ರಾಂ ಚಿನ್ನದಲ್ಲಿ ತಯಾರಾಯ್ತು ಒಂದಿಂಚಿನ ಶ್ರೀರಾಮಚಂದ್ರ
ನಂತರ, ದೆಹಲಿಯ ಔಷಧ ಅಂಗಡಿಯೊಂದಿಗೆ ಮಹಾರಾಷ್ಟ್ರದಲ್ಲಿ ಚುಚ್ಚುಮದ್ದನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡ ನಂತರ, ನಾಸಿರ್ ಮುಂಬೈಗೆ ಬಂದಿಳಿದಿದ್ದ. ಮುಂಬೈ ಪೊಲೀಸರಿಗೆ ಬಾಂದ್ರಾದಲ್ಲಿ ಸಿಕ್ಕಿಬಿದ್ದ.ಇಂಜೆಕ್ಷನ್‌ನ ಮೂಲ ಬೆಲೆ 32,000 ರೂ ಎಂದು ಹೇಳಲಾಗಿದ್ದರೂ ಅದನ್ನು 1 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಚುಚ್ಚುಮದ್ದಿನ 15 ಪೆಟ್ಟಿಗೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಗ್ರಾಹಕರನ್ನು ಕಳುಹಿಸಿದ ನಂತರ ಪೊಲೀಸರು ನಾಸಿರ್​​​​​​ನನ್ನು ಹಿಡಿದಿದ್ದಾರೆ. ಕೋವಿಡ್ ಚುಚ್ಚುಮದ್ದನ್ನು ಪಡೆದಿರುವುದಾಗಿ ಆರೋಪಿ ದೃಢಪಡಿಸಿದಾಗ, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಕರೊನಾದಿಂದ ಗುಣಮುಖರಾಗಿದ್ದ ಮಾಜಿ ಸಿಎಂ ಶಿವಾಜಿರಾವ್‌ ಪಟೇಲ್‌ ನಿಧನ
ಹಾಗೆಯೇ ಜುಲೈ 31 ರಂದು ಗುಜರಾತ್ ಪೊಲೀಸರು ನಕಲಿ ಟೋಸಿಲಿಜುಮಾಬ್ ಚುಚ್ಚುಮದ್ದನ್ನು ಮಾರಾಟ ಮಾಡುವ ದಂಧೆಕೋರರನ್ನು ಪತ್ತೆಹಚ್ಚಿದ್ದಾರೆ. ಈ ದಂಧೆಗೆ ಸಂಬಂಧಿಸಿದಂತೆ ಸೂರತ್ ಮತ್ತು ಅಹಮದಾಬಾದ್‌ನಿಂದ ಮೂವರನ್ನು ಬಂಧಿಸಲಾಗಿದೆ.ಅಪರಾಧ ವಿಭಾಗದ ಅಧಿಕಾರಿಗಳು 7.8 ಲಕ್ಷ ರೂ. ಬೆಲೆಯ ನಕಲಿ ಔಷಧವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕರೊನಾವೈರಸ್‌ಗೆ ಚಿಕಿತ್ಸೆ ನೀಡುವ ಔಷಧಗಳೆಂದು ಸ್ಟೀರಾಯ್ಡ್ ಚುಚ್ಚುಮದ್ದು ಮತ್ತು ಮಾತ್ರೆಗಳನ್ನು ರವಾನಿಸುತ್ತಿದ್ದರು.ಬಂಧಿತ ಆರೋಪಿಗಳನ್ನು ಆಶಿಶ್ ಷಾ, ಅಕ್ಷಯ್ ಶಾ ಮತ್ತು ಸೊಹೈಲ್ ತೈ ಎಂದು ಗುರುತಿಸಲಾಗಿದೆ. ಆಶಿಶ್ ಷಾ, ಅಕ್ಷಯ್ ಷಾ ಅಹಮದಾಬಾದ್‌ನ ಸಬರಮತಿ ಪ್ರದೇಶದಲ್ಲಿ ಫಾರ್ಮಸಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಸೂರತ್ ಮೂಲದ ಸೊಹೈಲ್ ತೈ ನಕಲಿ ಔಷಧಗಳನ್ನು ತಯಾರಿಸುತ್ತಿದ್ದ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − five =
Remember me
