ನವದೆಹಲಿ:ಜೀವಂತ ಮೂರು ಗುಂಡುಗಳನ್ನು ಜೇಬಿನಲ್ಲಿಟ್ಟುಕೊಂಡು ಸಂಸತ್ತಿನ ಆವರಣದೊಳಗೆ ಅನಧಿಕೃತವಾಗಿ ಪ್ರವೇಶಿಸಲು ಯತ್ನಿಸಿದ 44 ವರ್ಷದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಪಾರ್ಲಿಮೆಂಟಿನ ಗೇಟ್​ ನಂ. 8ರಿಂದ ಹಾಗೆ ನುಸುಳಲು ಯತ್ನಿಸಿದವನನ್ನು ಅಖ್ತರ್​ ಖಾನ್​ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನ ಜೇಬಿನಲ್ಲಿ 0.32 ಬೋರ್​ ಮಾದರಿಯ ಮೂರು ಜೀವಂತ ಗುಂಡುಗಳನ್ನು ಇಟ್ಟುಕೊಂಡಿರುವುದು ತಪಾಸಣೆಯಲ್ಲಿ ಪತ್ತೆಯಾಗಿದೆ. ಆತನನ್ನು ಈ ಬಗ್ಗೆ ವಿಚಾರಿಸಿದಾಗ ತಾನೂ ಪಾರ್ಲಿಮೆಂಟ್​ಗೆ ಬರುವಾಗ ಅವುಗಳನ್ನು ತೆಗೆದಿರಿಸಲು ಮರೆತು ಬಿಟ್ಟೆ ಎಂದಿದ್ದಾನೆ.
ಪೊಲೀಸ್​ ವಶದಲ್ಲಿರುವ ಅಖ್ತರ್ ಖಾನ್, ಶಬೀರ್ ಖಾನ್ ಎಂಬುವವರ ಪುತ್ರ. ಈತ ಉತ್ತರ ಪ್ರದೇಶದ ಗಜಿಯಾಬಾದ್ ಜಿಲ್ಲೆಯ ಗಡಿ ಭಾಗದ ನಿವಾಸಿ.
ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಸಂಸತ್ತಿನಲ್ಲಿ ಪ್ರವೇಶಿಸಲು ಅಕ್ತರ್​ಖಾನ್​ ಸಂದರ್ಶಕರ ಅಧಿಕೃತ ಪಾಸ್ ಹೊಂದಿದ್ದ.
ಪೊಲೀಸರು ಆಥವಾ ದಾಖಲಾತಿಗಳನ್ನು ಪರಿಶೀಲಿಸಿದರು. ಎಲ್ಲ ಸರಿಯಾಗಿದ್ದು, ಆತ ಅಧಿಕೃತವಾಗಿ ಶಸ್ತ್ರ ಇಟ್ಟುಕೊಳ್ಳಲು ಲೈಸೆನ್ಸ್​ ಪಡೆದಿದ್ದಾನೆ. ಅಲ್ಲದೆ ಜೇಬಿನಲ್ಲಿರುವ ಬುಲೆಟ್​ಗಳನ್ನು ಮರೆತು ತಂದಿದ್ದೇನೆ ಎಂದಿದ್ದಾನೆ. ಹಾಗಾಗಿ ಆತನನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
