ನವದೆಹಲಿ :ಕಳೆದ ವರ್ಷ ವಿಪರೀತ ಕೋಮುಗಲಭೆಗಳುಂಟಾಗಿದ್ದ ದೆಹಲಿಯ ಖಜೂರಿ ಖಾಸ್​ ಪ್ರದೇಶದಲ್ಲಿ ಮತ್ತೆ ಆತಂಕದ ವಾತಾವರಣ ಉಂಟಾಗಿದೆ. ವ್ಯಕ್ತಿಯೊಬ್ಬನನ್ನು ಹೊಡೆಯುತ್ತಾ ‘ಪಾಕಿಸ್ತಾನ್ ಮುರ್ದಾಬಾದ್’ ಎಂದು ಘೋಷಣೆ ಹಾಕಿಸಿದ ವಿಡಿಯೋ ನಿನ್ನೆ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ನೆಲದ ಮೇಲೆ ಬಿದ್ದಿರುವ ವ್ಯಕ್ತಿಯನ್ನು ಒಬ್ಬ ಥಳಿಸುತ್ತಾ ಪಾಕಿಸ್ತಾನ್ ಮುರ್ದಾಬಾದ್ ಎನ್ನಲು ಬಲವಂತ ಮಾಡುತ್ತಿದ್ದರೆ, ವಿಡಿಯೋ ಮಾಡುತ್ತಿರುವ ಮತ್ತೊಬ್ಬ ವ್ಯಕ್ತಿ ಜೋರಾಗಿ ಕೂಗು ಎನ್ನುತ್ತಿರುವುದು ಕೇಳಿಸುತ್ತದೆ ಎನ್ನಲಾಗಿದೆ. ಈ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡಿದ್ದು, ನೆಟ್ಟಿಗರು ಈ ಹಿಂಸಾಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ನಿನ್ನನ್ನೇ ಪ್ರೀತಿಸ್ತೇನೆ ಅಂದಾಕೆ ಈಗ ಆ ಭಾವನೆಯೇ ಬರ್ತಿಲ್ಲ ಅಂತಿದ್ದಾಳೆ- ಬದುಕೇ ಬೇಡವೆನಿಸಿದೆ.. ದಾರಿ ತೋರಿ..
ಇದೀಗ ಈ ವಿಡಿಯೋದಲ್ಲಿ ಹಲ್ಲೆ ಮಾಡಿದ ವ್ಯಕ್ತಿಯನ್ನು ಖಜೂರಿ ಖಾಸ್ ನಿವಾಸಿ ಅಜಯ್ ಗೋಸ್ವಾಮಿ ಎಂದು ಗುರುತಿಸಲಾಗಿದೆ. ಈತ 2020ರಲ್ಲಿ ನಡೆದ ಗಲಭೆಗಳಲ್ಲಿ ಕೂಡ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಈಶಾನ್ಯ ದೆಹಲಿ ಡಿಸಿಪಿ ಟ್ವಿಟರ್​ ಮೂಲಕ ತಿಳಿಸಿದ್ದಾರೆ.(ಏಜೆನ್ಸೀಸ್)
ನಿಕಿತಾ ತೋಮರ್ ಹತ್ಯೆ : ಇಬ್ಬರು ಯುವಕರನ್ನು ಅಪರಾಧಿಗಳೆಂದು ಘೋಷಿಸಿದ ಕೋರ್ಟ್

ಹ್ಯಾಪಿ ಶಾಪಿಂಗ್ : ಕರೊನಾ ಲಸಿಕೆ ಪಡೆದವರಿಗೆ ಡಿಸ್ಕೌಂಟ್ ಕೂಪನ್​ !

“ಹಿಂದೆ ಮಹಿಳೆಯರ ಸೊಂಟ ನಂಬರ್ 8 ರಂತೆ ಇರುತ್ತಿತ್ತು, ಈಗ ಡ್ರಮ್ಮಿನಂತಾಗಿದ್ದಾರೆ” ಎಂದ ಡಿಎಂಕೆ ಅಭ್ಯರ್ಥಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × 5 =
Remember me
