ಕೇಂದ್ರಪರ :ಬೀದಿನಾಯಿಯೊಂದನ್ನು ಅಮಾನುಷವಾಗಿ ಹೊಡೆದು ಸಾಯಿಸಿದ ವ್ಯಕ್ತಿಯೊಬ್ಬನನ್ನು ಒಡಿಶಾ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ನಾಯಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಬಾಬುಲಾ ಸಿಂಗ್​ ಎಂಬ 50 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ರಾಜ್ಯದ ಕೇಂದ್ರಪರ ಜಿಲ್ಲೆಯ ಪ್ರಹರಾಜಪುರದಲ್ಲಿ ಮೇ 28 ರಂದು ಈ ಘಟನೆ ನಡೆದಿದೆ. ಬಾಬುಲಾ ಸಿಂಗ್​ನ ವಿರುದ್ಧ ಐಪಿಸಿ ಸೆಕ್ಷನ್ 429 ಮತ್ತು ಪ್ರಿವೆಂಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್​ ಆ್ಯಕ್ಟ್​, 1960 ರ ಸೆಕ್ಷನ್ 11(1) ರಡಿ ಪಟ್ಟಮುಂಡೈ ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.
ಇದನ್ನೂ ಓದಿ:ಕರೊನಾದಿಂದ ತಬ್ಬಲಿಯಾದ ಮಕ್ಕಳ ನೆರವಿಗೆ ಧಾವಿಸಿದ ಸರ್ಕಾರ: ವಿಮಾ, ಪೆನ್ಷನ್‌ ಜತೆಗೆ ಶಿಕ್ಷಣ ವ್ಯವಸ್ಥೆ
ತನ್ನ ಎರಡು ಹುಂಜಗಳನ್ನು ಆ ನಾಯಿ ಸಾಯಿಸಿದ್ದರಿಂದ ಅದಕ್ಕೆ ಹೊಡೆದುದಾಗಿ ವಿಚಾರಣೆಯ ವೇಳೆ ಆರೋಪಿ ತಿಳಿಸಿದ್ದಾನೆ. ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಿದೆ ಎಂದು ಪಟ್ಟಮುಂಡೈ ಪೊಲೀಸ್ ಇನ್ಸ್​​ಪೆಕ್ಟರ್​ ರಾಕೇಶ್​ ತ್ರಿಪಾಠಿ ಹೇಳಿದ್ದಾರೆ.(ಏಜೆನ್ಸೀಸ್)
ಬಿಗ್​ಬಾಸ್​ ಸ್ಪರ್ಧಿ ನಟಿ ಯುವಿಕ ಚೌಧರಿ ವಿರುದ್ಧ ಅಟ್ರೊಸಿಟೀಸ್​ ಕೇಸು

ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ : ಲಘುವಿಮಾನದಲ್ಲಿ ಔಷಧ ಸಿಂಪಡಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
