ಮುಂಬೈ:ಮಹಿಳೆಯ ಮುಂದೆ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿಯೊಬ್ಬನನ್ನು ಮುಂಬೈನ ಘಾಟ್ಕೋಪರ್ ಉಪನಗರದ ಪೊಲೀಸರ ಶನಿವಾರ ಬಂಧಿಸಿದ್ದಾರೆ. ​
ಪೂರ್ವ ಘಾಟ್ಕೋಪರ್ ನಗರದ ರಾಜಾವಾಡಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ಸಂಭವಿಸಿತು. ಆರೋಪಿಯನ್ನು ಬಿಥು ಪರ್ಚಾ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂತ್ರಸ್ತ ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಆರೋಪಿ ಕಾರು ನಿಲ್ಲಿಸಿದ್ದಾನೆ.
ಇದನ್ನೂ ಓದಿ:ತಂಗಿ ಸಾವಿಗೆ ಭಾವನೇ ಕಾರಣವೆಂದು 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ ಬಾಮೈದ
ಮಹಿಳೆ ಕಾರಿನ ಬಳಿ ಬರುತ್ತಿದ್ದಂತೆ ಪ್ಯಾಂಟಿನ್​ ಜಿಪ್​ ಓಪನ್​ ಮಾಡಿ ಆಕೆಯ ಮುಂದೆ ಅಶ್ಲೀಲತೆ ಪ್ರದರ್ಶಿಸಿದ್ದಾನೆ. ಇದರಿಂದ ಗಾಬರಿಗೊಂಡ ಮಹಿಳೆ ತಕ್ಷಣ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಇದರಿಂದ ಹೆದರಿಕೆ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಇದಾದ ಬಳಿ ಮಹಿಳೆ ತಿಲಕ್​ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್​ 354 (ಎ) (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಹುಟ್ಟುಹಬ್ಬಕ್ಕೆ ಹೋದವಳ ಮೇಲೆ ಗ್ಯಾಂಗ್​ರೇಪ್​! ಮನೆಗೆ ಸೇರಿಸದ ಕುಟುಂಬಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
