ದೇವಸ್​:ಮಧ್ಯಪ್ರದೇಶದ ದೇವಸ್​ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋದ ಜಾಡು ಹಿಡಿದ ಪೊಲೀಸರು ಮನೆಯ ಮಾಲೀಕನನ್ನು ಬಂಧಿಸಿದ್ದಾರೆ.
ಬಂಧಿತನನ್ನು ದೇವಸ್ ಜಿಲ್ಲೆಯ ಶಿಪ್ರಾ ಗ್ರಾಮದ ಫಾರೂಖ್ ಖಾನ್ ಎಂದು ಗುರುತಿಸಲಾಗಿದೆ. ಪಾಕ್ ಧ್ವಜ ಹಾರಿಸಿದ ವಿಡಿಯೋ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಫಾರೂಖ್​ ಖಾನ್​ನನ್ನು ಬಂಧಿಸಿದ ವೇಳೆ ಆತ ಪೋಲಿಸರ ಬಳಿ ಅಮಾಯಕನಂತೆ ವರ್ತಿಸಿದ್ದ. ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ್ದು ತಾನಲ್ಲ ಎಂದು ಅಲವತ್ತುಕೊಂಡಿದ್ದಾನೆ. ಅಲ್ಲದೆ, ತನ್ನ 12 ವರ್ಷದ ಮಗ ಗೊತ್ತಿಲ್ಲದೇ ಹಾರಿಸಿರಬೇಕು ಎಂದೆಲ್ಲ ಸಮಜಾಯಿಷಿ ನೀಡಲು ನೋಡಿದ್ದ!
ಇದನ್ನೂ ಓದಿ:ಪ್ರಮೋದ್​ ಶೆಟ್ಟಿ ಅಲಿಯಾಸ್​ ಲಾಫಿಂಗ್​ ಬುದ್ಧನ ದಡೂತಿ ಅವತಾರ ಬಹಿರಂಗ
ಖಾನ್ ಮನೆಯಿಂದ ಪಾಕಿಸ್ತಾನದ ಧ್ವಜವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 153 ಪ್ರಕಾರ ವೈಷಮ್ಯ ಹರಡಲು ಪ್ರಯತ್ನಿಸಿದ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)
ಪಿಜಿ ಅಡ್ಮಿಷನ್​ನಲ್ಲಿ ಕೋಟಾ ನಿರ್ಧರಿಸುವ ಅಧಿಕಾರ ರಾಜ್ಯಗಳದ್ದು: ಸುಪ್ರೀಂ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
