ಶ್ರೀನಗರ: ಮಧ್ಯ ಕಾಶ್ಮೀರದ ಗಂಡರ್‌ಬಲ್ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ಪತ್ನಿಯನ್ನು ಕೊಲೆ ಮಾಡಿ ಶವವನ್ನು ನಾಲೆಗೆ ಎಸೆದ ಆರೋಪದಡಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.ಮೃತ ಮಹಿಳೆಯನ್ನು ಕಂಗನ್‌ನ ಗೊಂಚಿ ಮೊಹಲ್ಲಾ ಅಖಾಲ್ ನಿವಾಸಿ ಅಬ್ದುಲ್ ಮಜೀದ್ ಖಾನ್ ನ ಪತ್ನಿ ರುಬೀನಾ ಎಂದು ಗುರುತಿಸಲಾಗಿದ್ದು. ಜುಲೈ 14 ರಂದು ಸಿಂಧ್‌ ನಾಲೆಯಿಂದ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಇದು ಮಾನವೀಯ ‘ಮೌಲ್ಯ’ : ಅಂಧ ವ್ಯಕ್ತಿಗೆ ಬಸ್ ಹತ್ತಲು ಸಹಾಯ ಮಾಡಿದಾಕೆಗೆ ಸಿಕ್ಕಿದ್ದು ಅನೂಹ್ಯ ಪ್ರತಿಫಲ
ಮನೆಯಲ್ಲಿ ಆಕೆಯ ಪತಿಯೇ ಆಕೆಯನ್ನು ಕೊಲೆಗೈದು ನಂತರ ಸಹೋದರನ ಸಹಾಯದಿಂದ ಶವವನ್ನು ನಾಲೆಗೆ ಎಸೆದಿರುವುದಾಗಿ ತನಿಖೆಯಿಂದ ತಿಳಿದುಬಂದಿದ್ದು, ಆತನನ್ನು ಹಾಗೂ ಆತನ ಸಹೋದರನನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಗಂಡ ಹೆಂಡತಿ ನಡುವಿನ ಕಲಹವೇ ಈ ಕೊಲೆಗೆ ಕಾರಣವಾಗಿದೆ ಎಂದು ಗಂಡರ್‌ಬಾಲ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಖಲೀಲ್ ಪೋಸ್ವಾಲ್ ತಿಳಿಸಿದ್ದಾರೆ.ಕಂಗನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋನು ಪಂಜಾಬನ್ ಹೆಣ್ಣುಕುಲಕ್ಕೇ ಅವಮಾನವೆಂದಿತು ಕೋರ್ಟ್​​; ಯಾಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 8 =
Remember me
