ಉತ್ತರಪ್ರದೇಶ:ಹಾಪುರ್‌ನ ದೇವಸ್ಥಾನದಲ್ಲಿ ನಮಾಜ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹಿಸಿದೆ.
ಅನ್ವರ್ ಬಂಧಿತ ವ್ಯಕ್ತಿ. ಈತ ಶುಕ್ರವಾರ ಬೆಳಗ್ಗೆ ಸುಮಾರು 5 ಗಂಟೆಗೆ ಚಂಡಿ ಮಂದಿರದಲ್ಲಿ ‘ನಮಾಜ್’ ಸಲ್ಲಿಸಿದ್ದಾನೆ. ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ ನಂತರ ಶನಿವಾರ ಬಂಧಿಸಲಾಗಿದೆ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಉಚಿತ ಬಸ್​ ಪ್ರಯಾಣ; ಸಿಎಂ ಕೈಯಿಂದ ಮೊದಲು ಸ್ಮಾರ್ಟ್ ಕಾರ್ಡ್, ಟಿಕೆಟ್​​​​​ ಪಡೆದವರು ಯಾರು ಗೊತ್ತಾ?ಶುಕ್ರವಾರ ಬೆಳಿಗ್ಗೆ ಆರತಿಗಾಗಿ ದೇವಸ್ಥಾನದಲ್ಲಿ ಹಾಜರಿದ್ದರು. ಈ ವೇಳೆ ಅನ್ವರ್ ನೆಲದ ಮೇಲೆ ಬಟ್ಟೆಯನ್ನು ಹರಡಿ ನಮಾಜ್ ಮಾಡಲು ಪ್ರಾರಂಭಿಸಿದನು. ಅರ್ಚಕರು ಗಮನಿಸಿ ತಡೆದಿದ್ದಾರೆ. ನಂತರ ದೇವಸ್ಥಾನದ ಆವರಣದಿಂದ ಹೊರಕ್ಕೆ ಕರೆದೊಯ್ದರು.
ದೇವಸ್ಥಾನ ಸಮಿತಿಯ ಪದಾಧಿಕಾರಿ ಸತ್ಯನಾರಾಯಣ ಅಗರ್ವಾಲ್ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆತನನ್ನು ಅನ್ವರ್ ಎಂದು ಗುರುತಿಸಿ ಬಂಧಿಸಲಾಗಿದೆ. ನಮಾಜ್ ಮಾಡಿದ ನಂತರ ದೇವಾಲಯವನ್ನು ಎರಡು ಬಾರಿ ಗಂಗಾಜಲದಿಂದ ಶುದ್ಧೀಕರಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಖ್ಯಾತ ನಟಿ ಗೆಹನಾ ವಸಿಷ್ಠ್
ದೇವಸ್ಥಾನದಲ್ಲಿ ‘ನಮಾಜ್’ ಮಾಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಒತ್ತಾಯಿಸಿದರು. ಹಾಪುರ್ ಸದರ್ ಶಾಸಕ ವಿಜಯಪಾಲ್ ಅಧಾಟಿ ಅವರು ನಗರದ ದೇವಾಲಯಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಆಡಳಿತವನ್ನು ಒತ್ತಾಯಿಸಿದರು.
50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾದ ಪ್ರಭುದೇವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
