ಅಹಮದಾಬಾದ್​:ಪ್ರತಿಷ್ಠಿತ ಶಾಲೆಯಲ್ಲಿ ತನ್ನ ಇಬ್ಬರು ಮಕ್ಕಳಿಗೆ ಸೀಟ್​ ಕೊಡಿಸುವ ಸಲುವಾಗಿ ವ್ಯಕ್ತಿಯೋರ್ವ ಪ್ರಧಾನಿ ಕಚೇರಿಯ ಸಿಬ್ಬಂದಿಯಂತೆ ಪೋಸ್​ ನೀಡಿ ಪೊಲೀಸದ ಅತಿಥಿಯಾಗಿರುವ ಘಟನೆ ಗುಜರಾತಿನ ವಡೋದರಾದಲ್ಲಿ ನಡೆದಿದೆ.
ಬಂಧಿತನನ್ನು ಮನೀಶ್​ ತಿವಾರಿ ಎಂದು ಗುರುತಿಸಲಾಗಿದ್ದು, ಪಿಎಂಒ ಅಧಿಕಾರಿಯ ಸೋಗಿನಲ್ಲಿ ಈತ ಬಾರಿ ವಂಚನೆ ನಡೆಸಲು ಮುಂದಾಗಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ತಿವಾರಿ 2022ರ ಮಾರ್ಚ್​ ತಿಂಗಳಲ್ಲಿ ತನ್ನನ್ನು ತಾನು ಪಿಎಂಒ ಕಚೇರಿಯಲ್ಲಿ ಕಾರ್ಯತಂತ್ರ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿ ಶಾಲೆಯ ಆಡಳಿತ ಮಂಡಳಿ ಸದಸ್ಯರಿಗೆ ಪರಿಚಯಿಸಿಕೊಂಡಿದ್ದ. ಬಳಿಕ ತನ್ನ ಸ್ನೇಹಿತರೊಬ್ಬರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಮಕ್ಕಳಿಗೆ ಶಾಲೆಯಲ್ಲಿ ಅಡ್ಮಿಷನ್​ ಮಾಡಿಸಬೇಕಾಗಿದೆ ಎಂದು ಹೇಳಿದ್ದ.
ಶಾಲಾ ಆಡಳಿತ ಮಂಡಳಿಯ ಸಿಬ್ಬಂದಿಯೂ ಟ್ರಸ್ಟಿಯನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ಸೂಚಿಸಿದೆ. ಬಳಿಕ ಟ್ರಸ್ಟಿಯನ್ನು ಭೇಟಿ ಮಾಡಿ ಆರೋಪಿಯೂ ತಾನು ಪಿಎಂಒ ಕಚೇರಿಯ ಸಿಬ್ಬಂದಿ ಎಂದು ಬಿಂಬಿಸಿಕೊಂಡಿದ್ದು, ತನ್ನ ಪ್ರಭಾವವನ್ನು ಬಳಸಿ ಶಾಲೆಗೆ ಯೋಜನೆಗಳನ್ನು ಮಂಜೂರು ಮಾಡಿಸುವುದಾಗಿ ಹೇಳಿದ್ದಾನೆ. ಆದರೆ, ಅಡ್ಮಿಷನ್​ ಆಗುತ್ತಿರುವ ಮಕ್ಕಳಿಬ್ಬರ ಸಂಪೂರ್ಣ ಖರ್ಚು ವೆಚ್ಚವನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಷರತ್ತು ವಿಧಿಸಿದ್ಧಾನೆ.
ಇದನ್ನೂ ಓದಿ:ವೈದ್ಯಕೀಯ ಸೇರಿ ತಾಂತ್ರಿಕ ಕೋರ್ಸ್‌ನಲ್ಲಿ 300 ಸೀಟ್ ಮೀಸಲಾತಿ ನೀಡಿ: ಪಿಜಿಆರ್ ಸಿಂಧ್ಯಾ
ಆರೋಪಿ ಮಾತಿಗೆ ಮರುಳಾದ ಶಾಲೆಯ ಟ್ರಸ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮಕ್ಕಳಿಬ್ಬರಿಗೆ ವಿಶೇಷ ಪ್ರಕರಣಗಳಂದು ಭಾವಿಸಿ ಪ್ರವೇಶ ಕಲ್ಪಿಸಿದ್ಧಾರೆ. ಇದಾದ ವರ್ಷದ ಬಳಿಕ ಆರೋಪಿಯೂ ಪ್ರಧಾನಿ ಕಚೇರಿಯಿಂದ ವಿಶೇಷ ಯೋಜನೆಗಳನ್ನು ಮಂಜೂರು ಮಾಡಿಸುವುದಾಗಿ ಹೇಳಿದ್ದನ್ನು ಸಿಬ್ಬಂದಿಯೊಬ್ಬರು ನೆನಪಿಸಿದ್ಧಾರೆ.
ಈ ಬಗ್ಗೆ ಆರೋಪಿ ಬಳಿ ಪ್ರಶ್ನಿಸಿದಾಗ ಸಬೂಬುಗಳನ್ನು ಹೇಳಿಕೊಂಡು ಆತ ಎಸ್ಕೇಪ್​ ಆಗುತ್ತಿದ್ದನ್ನು ಗಮನಿಸಿದ ಶಾಲಾ ಸಿಬ್ಬಂದಿ ವಘೋಡಿಯಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.
ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರ ಬಂದಿದೆ. ಬಂಧಿತನ ವಿರುದ್ಧ ಐಪಿಸಿ ಸೆಕ್ಷನ್​ 406, 420, 170ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
