ಉತ್ತರಪ್ರದೇಶ:ವಾಟ್ಸ್​ಆ್ಯಪ್ ಗ್ರೂಪ್‌ನಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕುರಿತು ಅವಹೇಳನಕಾರಿ ಕಾಮೆಂಟ್​ ಮಾಡಿದ್ದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜದ ಹರಿಕಾರರು: ಡಾ. ಗಿರಿಜಾ ಹಸಬಿ
ಈ ಕುರಿತು ಕೋಟ್ವಾಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಜಯ್ ಕುಮಾರ್ ಸೇಠ್ ಮಾತನಾಡಿ, “ಆಗಸ್ಟ್ 4 ರಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಕಾಮೆಂಟ್ ಬಹಳ ವೈರಲ್ ಆಗಿತ್ತು. ಬಂಧಿತ ವ್ಯಕ್ತಿಯನ್ನು ಸಹಾಬುದ್ದೀನ್ ಅನ್ಸಾರಿ ಎಂದು ಗುರುತಿಸಲಾಗಿದ್ದು, ಟ್ವಿಟರ್ ಮೂಲಕ ನಾವು ದೂರನ್ನು ಸ್ವೀಕರಿಸಿದೆವು. ಕಾಮೆಂಟ್‌ನ ಸ್ಕ್ರೀನ್‌ಶಾಟ್ ಕೂಡ ಪಡೆಯಲಾಗಿದೆ” ಎಂದು ಅಧಿಕಾರಿಗಳು ಹೇಳಿದರು.
“ದೂರಿನ ಆಧಾರದ ಮೇಲೆ ಸಹಾಬುದ್ದೀನ್ ಅನ್ಸಾರಿ ವಿರುದ್ಧ ಐಪಿಸಿ, ಐಟಿ ಕಾಯ್ದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, “ವಾಟ್ಸ್​ಆ್ಯಪ್ ಗ್ರೂಪ್‌ನ ಹೆಸರು ‘ನಗರ ಪಾಲಿಕೆ ಪರಿಷತ್ ಭಡೋಹಿ’ ಎಂದು. ಇದು ಭಡೋಹಿಯ ನಗರ ಪಾಲಿಕೆ ಪರಿಷತ್ತಿನ ಬಹುತೇಕ ಎಲ್ಲಾ ಕಾರ್ಪೊರೇಟರ್‌ಗಳು ಮತ್ತು ಸಾರ್ವಜನಿಕರನ್ನು ಹೊಂದಿರುವ ಗ್ರೂಪ್ ಆಗಿತ್ತು” ಎಂದು ಹೇಳಿದರು.
ಇದನ್ನೂ ಓದಿ:VIDEO| 150 ಅಡಿ ಎತ್ತರದ ವಿದ್ಯುತ್​​ ಟವರ್ ಏರಿದ ಗೆಳತಿಯಿಂದ ರಂಪಾಟ, ಪ್ರೇಮಿಗಳ ಕಿತ್ತಾಟಕ್ಕೆ ಗ್ರಾಮಸ್ಥರ ಪರದಾಟ
“ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಈ ಗ್ರೂಪ್​ ಅನ್ನು ತೆರೆಯಲಾಗಿತ್ತು. ಇದು ಕಾರ್ಪೊರೇಟರ್‌ಗಳ ಅಧಿಕೃತ ವಾಟ್ಸ್​ಆ್ಯಪ್ ಗ್ರೂಪ್ ಅಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).
25 ದಿನಗಳನ್ನು ಪೂರೈಸಿದ ‘ಬೇಬಿ’; ಹೊಸ ಸೀನ್ಸ್​ಗಳೊಂದಿಗೆ ವಿಶೇಷ ಪ್ರದರ್ಶನಕ್ಕೆ ಮುಂದಾದ ಚಿತ್ರತಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + twenty =
Remember me
