ಹೈದರಾಬಾದ್:ಮೊಸಳೆಯನ್ನು ಕೊಂದು ಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ? ಪರಿಶೀಲನೆಗೆ ಮುಂದಾಗಿದೆ ಈ ರಾಜ್ಯ..
ಇತ್ತೀಚಿನ ಪ್ರವಾಹದಿಂದ ಮುಲುಗು ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಗೋದಾವರಿ ನದಿಯ ದಡಕ್ಕೆ ನುಗ್ಗಿದ್ದ ಮೊಸಳೆಯನ್ನು ಕಳ್ಳ ಬೇಟೆಗಾರರು ಹಿಡಿದಿದ್ದಾರೆ. ನಂತರ ಯಾರಿಗೂ ತಿಳಿಯದಂತೆ ಅದನ್ನು ಕೊಂದು ಮಾಂಸವನ್ನು ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಜೇಡು ಮಂಡಲದ ಚಂದ್ರುಪಟ್ಲ ಗ್ರಾಮದಲ್ಲಿ ಸೋಮವಾರ ದಾಳಿ ನಡೆಸಿದ್ದು ಒಬ್ಬ ವ್ಯಕ್ತಿ ಸಿಕ್ಕಿಬಿದ್ದರೆ, ಇತರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯ ವೇಳೆ ಅಧಿಕಾರಿಗಳು ಮೊಸಳೆಯ ಮಾಂಸ ಮತ್ತು ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅರಣ್ಯಾಧಿಕಾರಿ, ಸೆರೆ ಸಿಕ್ಕ ವ್ಯಕ್ತಿ ಬೇಟೆಗಾರರ ಗುಂಪಿನ ಸದಸ್ಯನಾಗಿದ್ದು ಆತನ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ. ಪ್ರಕರಣದ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಇತರ ಕಳ್ಳಬೇಟೆಗಾರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹುಡುಗಿ ಜತೆ ಮಾತನಾಡಿದ್ದಕ್ಕಾಗಿ ಸ್ನೇಹಿತನ ಪ್ರಾಣ ತೆಗೆದ ವಿದ್ಯಾರ್ಥಿ..
ನಿರಂತರ ಮಳೆ ಮತ್ತು ಪ್ರವಾಹದಿಂದಾಗಿ ಹಲವಾರು ಮೊಸಳೆಗಳು ಗೋದಾವರಿ ಮತ್ತು ಕೃಷ್ಣಾ ನದಿಗಳ ದಡಗಳ ಕೃಷಿ ಗದ್ದೆಗಳು, ಕೊಳಗಳು ಮತ್ತು ಇತರ ಜಲಮೂಲಗಳಿಗೆ ನುಗ್ಗುತ್ತಿದ್ದು, ಇದು ಸ್ಥಳೀಯ ನಿವಾಸಿಗಳನ್ನು ಚಿಂತೆಗೀಡು ಮಾಡಿದೆ. ವನಪರ್ತಿ, ಗದ್ವಾಲ್, ನಾರಾಯಣಪೇಟೆ ಮತ್ತು ಮುಳುಗು ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ನದಿಗೆ ತಾಗಿಕೊಂಡಿರುವ ಪ್ರದೇಶಗಳಲ್ಲಿ ಮೊಸಳೆಗಳು ಕಾಣಿಸಿಕೊಂಡಿವೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − twelve =
Remember me
