ಮುಂಬೈ:ಬಾಲಿವುಡ್​ ನಟನ ಪುತ್ರಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸಿ ಹಣ ಕೊಡುವಂತೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಯುವಕನನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಮಲಾಡ್​ ಬಡಾವಣೆಯ ನಿವಾಸಿ ಕೌಮೇಲ್​ ಹನೀಫ್​ ಪಟಾನಿ (25) ಬಂಧಿತ. ಹಣ ಕೊಡುವುದಾಗಿ ನಂಬಿಸಿ, ತುಂಬಾ ಉಪಾಯವಾಗಿ ಆತನನ್ನು ಆತನ ಮನೆಯ ಬಳಿಯೇ ಕರೆಸಿಕೊಂಡು ಬಂಧಿಸಲಾಯಿತು. ಇದೀಗ ಈತನ ವಿರುದ್ಧ ಮಹಿಳೆಯರ ಮಾನಹರಣ ಮಾಡಲು ಯತ್ನ, ಹಣ ಸುಲಿಗೆ ಯತ್ನ ಸೇರಿ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳಲ್ಲದೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಬಂಗೂರ್​ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ, ಬಂಧಿತನ ಸಹೋದರಿ ಮತ್ತು ಬಾಲಿವುಡ್​ ನಟನ ಪುತ್ರಿ ಒಂದೇ ಕಾಲೇಜಿನಲ್ಲಿ ಓದಿದವರಾಗಿದ್ದು, ಸ್ನೇಹಿತರೂ ಆಗಿದ್ದರು. ಆದರೂ ಈ ಯುವಕ ಹೀಗೆ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಯಾರ ಮೇಲೂ ಯಾವುದೇ ಭಾಷೆಯನ್ನು ಹೇರುವುದಿಲ್ಲ ಎಂದ ರಮೇಶ್​ ಪೋಖ್ರಿಯಾಲ್​
ಕೆಲವು ದಿನಗಳ ಹಿಂದೆ ಬಾಲಿವುಡ್​ ನಟ ಪುತ್ರಿಯ ಇನ್​ಸ್ಟಾಗ್ರಾಂ ಖಾತೆಗೆ ವ್ಯಕ್ತಿಯೊಬ್ಬ ಸಂದೇಶ ರವಾನಿಸಿ, ಕಾಲೇಜು ದಿನಗಳಿಂದಲೂ ನಿನ್ನನ್ನು ನಾನು ಬಲ್ಲೆ. ನಿನ್ನ ಹಲವು ಖಾಸಗಿ ಫೋಟೋಗಳು ನನ್ನ ಬಳಿ ಇವೆ. ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದು ಎಂದರೆ, ಹಣ ಕೊಡು ಎಂದು ತಾಕೀತು ಮಾಡಿದ್ದ. ಹಾಗೂ ತಕ್ಷಣವೇ ಆ ಸಂದೇಶಗಳನ್ನು ಡಿಲೀಟ್​ ಮಾಡಿ ಡಿಜಿಟಲ್​ ಹೆಜ್ಜೆಗುರುತುಗಳು ಸಿಗದಂತೆ ಮಾಡುತ್ತಿದ್ದ. ಬಳಿಕ ಯುವತಿಯ ಮೊಬೈಲ್​ ಫೋನ್​ಗೆ ಫೋನ್​ ಮಾಡಿ ಹಣ ಕೊಡುವಂತೆ ಪೀಡಿಸುತ್ತಿದ್ದ ಎಂದು ಬಾಲಿವುಡ್​ ನಟನ ಪುತ್ರಿ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿರುವುದಾಗಿ ಹಿರಿಯ ಇನ್​ಸ್ಪೆಕ್ಟರ್​ ಚಿಮಾಜಿ ಆಧಾವ್​ ತಿಳಿಸಿದ್ದಾರೆ.
ಬ್ಲ್ಯಾಕ್​ಮೇಲ್​ ಮಾಡುತ್ತಿದ್ದ ಯುವಕ ಲಕ್ಷಾಂತರ ರೂಪಾಯಿಗೆ ಒತ್ತಾಯಿಸುತ್ತಿದ್ದ. ಆದರೆ, ಬಾಲಿವುಡ್​ ನಟನ ಪುತ್ರಿ 15ರಿಂದ 20 ಸಾವಿರ ರೂ. ಕೊಡಲು ಸಿದ್ಧವಾಗಿದ್ದಳು. ಆತ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟ ಕಾರಣ ಅನಿವಾರ್ಯವಾಗಿ ವಿಷಯವನ್ನು ಆಕೆ ತನ್ನ ಪಾಲಕರಿಗೆ ತಿಳಿಸಿದ್ದಳು. ಅವರ ಕೊಟ್ಟ ದೂರಿನನ್ವಯ ತಂತ್ರ ರೂಪಿಸಿದ ಪೊಲೀಸರು ಆತನ ಮನೆಯಿಂದಲೇ ಪಟಾನಿಯನ್ನು ಬಂಧಿಸಿದರು.
ಸ್ನೇಹಿತನ ಜತೆ ಸೇರಿ ಪತ್ನಿಯ ಕೊಂದು ಮೂಟೆ ಕಟ್ಟಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
