ಮುಂಬೈ:ಬಾಲಿವುಡ್​ ನಟಿ ಸನ್ನಿ ಲಿಯೋನ್​ ಪತಿ ಡೇನಿಯಲ್​ ವೆಬರ್ ಕಾರಿನ ನಂಬರ್​ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮುಂಬೈನ ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪಿಯುಷ್​ ಸೇನ್​ ಎಂದು ಗುರುತಿಸಲಾಗಿದೆ. ಬುಧವಾರ ಒಂದು ದಿನದವರೆಗೆ ಪೊಲೀಸ್​ ಕಸ್ಟಡಿಯಲ್ಲಿದ್ದ ಪಿಯುಷ್​ರನ್ನು ದಂಡ ಕಟ್ಟಿಸಿಕೊಂಡು ಎಚ್ಚರಿಕೆ ನೀಡಿ ಇಂದು ಬಿಟ್ಟು ಕಳುಹಿಸಿದ್ದಾರೆ.
ಇನ್ನು 2020ರ ಸೆಪ್ಟೆಂಬರ್​ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಅಡಿಯಲ್ಲಿ ಸನ್ನಿ ಪತಿ ಡೇನಿಯಲ್​ ಕೆಲವು ರಶೀದಿಗಳನ್ನು ಸ್ವೀಕರಿಸಿದ್ದರಂತೆ. ಆದರೆ, ನಿಯಮ ಉಲ್ಲಂಘನೆ ಮಾಡಿದ್ದು ಇದೇ ಪಿಯುಷ್​ ಸೇನ್​ ಎಂದು ಮುಂಬೈ ಸಂಚಾರಿ ನಿಯಂತ್ರಣ ಡಿಸಿಪಿ ಮಾಹಿತಿ ನೀಡಿದರು.
ಇದನ್ನೂ ಓದಿರಿ:ಬೈಕ್​ ಕಳ್ಳನ ಸೆರೆ ಹಿಡಿಯಿತು ಸಿಸಿಟಿವಿ ಕ್ಯಾಮರಾ, ವಿಡಿಯೋ ಈಗ ವೈರಲ್…
ಪಿಯುಷ್​ ಹೇಗೆ ಸಿಕ್ಕಿಬಿದ್ದ?ಡೇನಿಯಲ್ ಕಾರು​ ಚಾಲಕ ಅಕ್ಬರ್​ ಖಾನ್​ ಮಂಗಳವಾರ ಸೇಮ್​ ನಂಬರ್​ ಇರುವ ಕಾರನ್ನು ಅಂಧೇರಿಯಲ್ಲಿರುವ ಅಚ್ಯುತ್​ರಾವ್​ ಪಟವರ್ಧನ್​ ಮಾರ್ಗ್​ ಬಳಿ ಪತ್ತೆ ಹಚ್ಚಿದ್ದಾರೆ. ಬಳಿಕ ಕಾರಿನ ನಂಬರ್​ ದುರ್ಬಳಕೆ ಆಗುತ್ತಿರುವುದನ್ನು ಡಿಎನ್​ ನಗರ ಸಂಚಾರಿ ಕಾನ್ಸ್​ಟೇಬಲ್​ಗೆ ಅಕ್ಬರ್​ ದೂರು ನೀಡಿದ್ದಾರೆ. ಈ ವೇಳೆ ಕಾನ್ಸ್​ಟೇಬಲ್​ ಪಿಯುಷ್​​ನನ್ನು ತಡೆದು ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರೆ.
ಈ ವೇಳೆ ಪಿಯುಷ್​ ಕಾರಿನ ದಾಖಲೆಗಳನ್ನು ತೋರಿದ್ದಾನೆ. ಆದರೆ, ನೋಂದಣಿ ಮತ್ತು ಚಾಸಿಸ್​ ಸಂಖ್ಯೆಯಲ್ಲಿ ವ್ಯತ್ಯಾಸ ಇರುವುದನ್ನು ಕಾನ್ಸ್​ಟೇಬಲ್​ ಗಮನಿಸಿದ್ದಾರೆ. ಇದಾದ ಬಳಿಕ ಡೇನಿಯಲ್​ ಸಹ ಮುಂಬೈ ಠಾಣೆಗೆ ಆಗಮಿಸಿ ಕಾರಿನ ದಾಖಲೆಗಳನ್ನು ನೀಡಿದ್ದಾರೆ. ಆಗಲೇ ಪಿಯುಷ್​ಗೆ ಗೊತ್ತಾಗಿದ್ದು ಇಷ್ಟು ದಿನ ತಾನು ಬಳಸುತ್ತಿದ್ದು ಸನ್ನಿ ಲಿಯೋನ್​ ಪತಿಯ ಕಾರಿನ ನಂಬರ್​ ಎಂದು. ತಕ್ಷಣ ಆತ ಗೊಂದಲಕ್ಕೀಡಾದ.
ಇದಾದ ಬಳಿಕ ಪಿಯುಷ್​ ವಿರುದ್ಧ ಮುಂಬೈ ಸಂಚಾರಿ ಪೊಲೀಸರು ಮೋಟಾರು ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿ ಕ್ರಮ ಜರುಗಿಸಿದ್ದಾರೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸರ್ಕಾರದ ಹೊಸ ನೀತಿಯಿಂದ ವಾಟ್ಸ್​ಆ್ಯಪ್​ಗೆ ಬ್ರೇಕ್?! ಇನ್ಮೇಲೆ ವಾಟ್ಸ್​ಆ್ಯಪ್​​ ಕಥೆ ಏನು?

ಕೆಎಸ್​ಆರ್​ಟಿಸಿ ಬಸ್​ ಕಳುವು ಮಾಡಿದವ ಅಂದರ್​: ಖದೀಮ ಕೊಟ್ಟ ಕಾರಣ ಕೇಳಿ ಪೊಲೀಸರೇ ತಬ್ಬಿಬ್ಬು!

ಪ್ರವಾಸಿ ಆಸ್ಟ್ರೇಲಿಯಾ ಎದುರು ಕಿವೀಸ್ ತಂಡಕ್ಕೆ 4 ರನ್ ರೋಚಕ ಜಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + six =
Remember me
