ಕೋಯಿಕ್ಕೋಡ್​:ಬರೋಬ್ಬರಿ 25 ಲಕ್ಷ ರೂ. ಮೌಲ್ಯದ ಮಾದಕ ವಸ್ತು ‘ಚರಾಸ್’ ಅನ್ನು ಕಳ್ಳಸಾಗಾಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕೇರಳದ ಅಬಕಾರಿ ಜಾರಿ ದಳದ ಅಧಿಕಾರಿಗಳು ಕೋಯಿಕ್ಕೋಡ್​ನ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನನ್ನು ಮುಹಮ್ಮದ್​ ರಶೀಬ್​ ಎಂದು ಗುರುತಿಸಲಾಗಿದ್ದು, ಈತ ಕೋಯಿಕ್ಕೋಡ್​ನ ಪಲ್ಲಿಯಾರ್​ಕಂಡಿಯ ನಿವಾಸಿ. ಶುಕ್ರವಾರ ನಸುಕಿನ ಜಾವ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಮದ್ವೆ, ಫಂಕ್ಷನ್​ಗಳಲ್ಲಿ ಅಪರಿಚಿತ ಮಕ್ಕಳು ಓಡಾಡ್ತಿದ್ರೆ ಇರಲಿ ಎಚ್ಚರ- ಹತ್ತಾರು ಲಕ್ಷ ರೂ. ಬಿಜಿನೆಸ್​ ಇದು!
ಚರಾಸ್​ ಅನ್ನು ಬ್ಲೂಟೂತ್​ ಸ್ಪೀಕರ್​ನಲ್ಲಿಟ್ಟು ರಶೀಬ್​ ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚರಾಸ್​ ಮೌಲ್ಯ 25 ಲಕ್ಷ ರೂ. ಇದೆ. ಅಬಕಾರಿ ಕಮೀಷನರ್​ ನೀಡಿದ ರಹಸ್ಯ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಇಂಧನ ದರ ಗಗನಮುಖಿ – ಎರಡು ವಾರದಲ್ಲಿ ಪೆಟ್ರೋಲ್​ 2 ರೂಪಾಯಿ, ಡೀಸೆಲ್ ಅಂದಾಜು 3 ರೂಪಾಯಿ ಹೆಚ್ಚಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − eleven =
Remember me
