ಚಂಡೀಗಢ:ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ 22 ವರ್ಷದ ಯುವಕನೊಬ್ಬನ ಹೃದಯಕ್ಕೆ ಇರಿದಿರುವ ಘಟನೆ ಪಂಜಾಬ್​ನ ಪಟಿಯಾಲಾದಲ್ಲಿ ಬೆಳಕಿಗೆ ಬಂದಿದೆ. ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಬಳಿಕ ಹೃದಯಕ್ಕೆ ಇರಿದಿದ್ದಾರೆ. ಸಂತ್ರಸ್ತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅತಿಯಾಗಿ ರಕ್ತ ಸೋರಿಕೆ ಆಗಿದ್ದರಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:
ಮೃತ ದುರ್ದೈವಿಯನ್ನು ಕರಣ್​ ಎಂದು ಗುರುತಿಸಲಾಗಿದೆ. ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ವೈರಲ್​ ವಿಡಿಯೋದಲ್ಲಿ ಬೈಕ್​ನಲ್ಲಿ ಬರುವ ಮೂವರು ವ್ಯಕ್ತಿಗಳು ಕರಣ್​ನನ್ನು ನೆಲಕ್ಕೆ ಬೀಳಿಸುತ್ತಾರೆ. ಕರಣ್​ ಎದ್ದು ಹೋಗಲು ಪ್ರಯತ್ನಿಸುತ್ತಾನೆ ಎದುರಿನಿಂದ ಬರುವ ತಮ್ಮ ಸಹಚರರ ಬೈಕ್​ಗೆ ತಳ್ಳುತ್ತಾರೆ. ಬಳಿಕ ಆತನ ಎದೆಗೆ ಕಾಲಿನಿಂದ ಒದ್ದು ಆತನ ಮೇಲೆ ಹಲ್ಲೆ ಮಾಡಿರುವುದನ್ನು ಕಾಣಬಹುದಾಗಿದೆ.
DSP City-1 Patiala provided important information regarding the tragic murder of a young boy in the Ablowal area of Patiala city. The police are thoroughly investigating the case, ensuring that justice will be served.pic.twitter.com/mhsrfZgFQf
ಕರಣ್​​​ ಅಬ್ಲೋವಲ್ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ದ್ವಿಚಕ್ರದಲ್ಲಿ ಬಂದ ವ್ಯಕ್ತಿಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹತ್ಯೆ ಮಾಡಿದವರಲ್ಲಿ ಮೂವರನ್ನು ಅಂಶ್, ಅಮನ್ಮೀತ್ ಮತ್ತು ಯುವರಾಜ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು. ವೈಯಕ್ತಿಕ ದ್ವೇಷವೇ ಈ ದಾಳಿಗೆ ಕಾರಣ ಎಂದು ಪ್ರಾಥಮಿಕ ಸಾಕ್ಷ್ಯಗಳು ತಿಳಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​​)
ವೈರಲ್​ ವಿಡಿಯೋ; ಊಟ ನೀಡಲು ನಿರಾಕರಿಸಿದ ಹೋಟೆಲ್​​ಗೆ ಟ್ರಕ್​ ನುಗ್ಗಿಸಿದ ಚಾಲಕ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − twelve =
Remember me
