ಚೆನ್ನೈ:ಹೆಣ್ಣುಮಕ್ಕಳನ್ನು ಎಷ್ಟು ಜೋಪಾನ ಮಾಡಿದರೂ ಸಾಲದು ಎನ್ನುವುದಕ್ಕೆ ಉದಾಹರಣೆ ಈ ಘಟನೆ. ಚೆನ್ನಾಗಿ ಪರಿಚಯ ಇರುವವರೇ ಮೈಮೇಲೆ ಎರಗಿದರೆ ಏನು ಮಾಡೋದು, ಹೇಳಿ! ಗೆಳತಿಯ ಮನೆಗೆ ಟ್ಯೂಷನ್​ಗೆಂದು ಹೋದ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆದಿರುವ ಹೀನಾಯ ಘಟನೆ ಚೆನ್ನೈನಿಂದ ವರದಿಯಾಗಿದೆ.
ಚೆನ್ನೈ ನಗರದಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ತನ್ನ ಸಹಪಾಠಿಯ ತಂದೆಯ ಬಳಿ ಟ್ಯೂಷನ್​ಗೆ ಹೋಗುತ್ತಿದ್ದಳು. ಕಳೆದ ವಾರ ಹೀಗೇ ಟ್ಯೂಷನ್ ಕ್ಲಾಸಿಗೆ ಹೋಗಿದ್ದ ಆಕೆ ಅತ್ತುಕೊಂಡು ಮನೆಗೆ ಬಂದಿದ್ದಾಳೆ. ಗುಪ್ತಾಂಗದಲ್ಲಿ ರಕ್ತ ಬರುವಂತೆ ಗಾಯವಾಗಿದ್ದ ಬಾಲಕಿಯನ್ನು ಪಾಲಕರು ತಕ್ಷಣ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಲೈಂಗಿಕ ಶೋಷಣೆ ನಡೆದಿರುವುದನ್ನು ದೃಢಪಡಿಸಿದ ವೈದ್ಯರು ಚೈಲ್ಡ್ ಹೆಲ್ಪ್​ಲೈನ್​ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ:ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್
ವಿಚಾರಣೆ ನಡೆಸಿದ ಪೊಲೀಸರು ತನ್ನ ಮಗಳ ಸಹಪಾಠಿಯೂ ಆದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಶೋಷಣೆ ಮಾಡಿದ 44 ವರ್ಷದ ಗಂಡಸನ್ನು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಕೇಸು ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.(ಏಜೆನ್ಸೀಸ್)
ಚಾಲಕನ ನಿಯಂತ್ರಣ ಕಳೆದುಕೊಂಡು ಕಾಲುವೆ ಬಿದ್ದ ಕಾರು: ಇಬ್ಬರ ಮೃತದೇಹ ಪತ್ತೆ, ಮೂವರು ನಾಪತ್ತೆ!
ದೆಹಲಿಯಿಂದ ಆಸ್ಟ್ರೇಲಿಯಾಕ್ಕೆ ಹೊರಟಿದ್ದ ಬಣ್ಣಬಣ್ಣದ ಲೆಹೆಂಗಾಗಳಲ್ಲಿ ಏನು ಅಡಗಿತ್ತು ಗೊತ್ತಾ ?!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
