ಹೈದರಾಬಾದ್​:ಪ್ರಭಾಸ್​, ಸೈಫ್​ ಅಲಿ ಖಾನ್, ಕೃತಿ ಸನೊನ್​ ಅಭಿನಯದ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಚಿತ್ರ ಆದಿಪುರುಷ್​ ಶುಕ್ರವಾರ(ಜೂನ್​ 16) ರಂದು ವಿಶ್ವದಾದ್ಯಂತ ತೆರೆ ಕಂಡಿದೆ.
ಬಿಡುಗಡೆಗೂ ಮುನ್ನ ತೀವ್ರ ಕುತೂಹಲ ಮೂಡಿಸಿದ್ದ ಆದಿಪುರುಷ್ ಚಿತ್ರವು ಕಳಪೆ VFX ಸೇರಿದಂತೆ ಅನೇಕ ವಿಚಾರಗಳಿಗೆ ಹೆಚ್ಚು ಸದ್ದು ಮಾಡಿತ್ತು. ಈ ಸಿನಿಮಾ ಜಾಗತಿಕವಾಗಿ 7,000ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಬಿಡುಗಡೆ ಜೂನ್​ 16ರಂದು ಬಿಡುಗಡೆಯಾಗಿದೆ.
ತಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಪ್ರಭಾಸ್​ ಅಭಿಮಾನಿಗಳ ವರ್ತನೆ ಮಿತಿ ಮೀರಿದ್ದು, ಸಿನಿಮಾದ ಕುರಿತು ಕೆಟ್ಟದ್ದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ಒಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಅಭಿಮಾನಿಯೋರ್ವ ಬಿಯರ್​ ಬಾಟಲ್​ನಿಂದ ಕೈ ಕೊಯ್ದುಕೊಂಡು ಪ್ರಭಾಸ್​ಗೆ ಜೈಕಾರ ಹಾಕಿ ಅತಿರೇಕದ ವರ್ತನೆ ತೋರಿರುವ ವಿಡಿಯೋಗಳು ವೈರಲ್​ ಆಗಿವೆ.
#Adipurush: Seat reserved for Lord#Hanumanin theatres#prabhas#kritisanon#SaifAliKhan#OmRaut#Bollywoodpic.twitter.com/5WFGptyy84— Free Press Journal (@fpjindia)June 16, 2023

#Adipurush: Seat reserved for Lord#Hanumanin theatres#prabhas#kritisanon#SaifAliKhan#OmRaut#Bollywoodpic.twitter.com/5WFGptyy84
ಇದನ್ನೂ ಓದಿ:ಬಿಯರ್​ ಬಾಟಲ್​ನಿಂದ ಕೈ ಕೊಯ್ದುಕೊಂಡು ಪ್ರಭಾಸ್​ಗೆ ಜೈಕಾರ: ಅಭಿಮಾನಿಯ ಅತಿರೇಕದ ವರ್ತನೆ, ವಿಡಿಯೋ ವೈರಲ್​
ಚಿತ್ರ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್​ಗಳಲ್ಲಿ ಒಂದು ಸೀಟ್​ಅನ್ನು ಆಂಜನೇಯನಿಗೆ ಕಾಯ್ದಿರಿಸುವಂತೆ ಸಿನಿಮಾದ ನಿರ್ದೇಶಕ ಓಂ ರಾವತ್​ ಮನವಿ ಮೇರೆಗೆ ಮಾಲೀಕರು ಆಸನವನ್ನು ರಾಮ ಬಂಟನಿಗೆ ಮೀಸಲಿಟ್ಟಿದ್ಧಾರೆ. ಕಾಯ್ದಿರಿಸಿದ ಆಸನದಲ್ಲಿ ಕೇಸರಿ ಬಟ್ಟೆ, ಆಂಜನೇಯನ ಫೋಟೋ, ಹಣ್ಣುಗಳನ್ನು ಇಟ್ಟು ಪೂಜೆ ಸಹ ಮಾಡಲಾಗಿದೆ.
ಆಂಜನೇಯ ಸ್ವಾಮಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತುಕೊಂಡಿದ್ದಕ್ಕಾಗಿ ವ್ಯಕ್ತಿಯೊಬ್ಬನ್ನು ಪ್ರಭಾಸ್​ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಹೈದರಾಬಾದಿನ ಬ್ರಹ್ಮರಂಬ ಚಿತ್ರಮಂದಿರದಲ್ಲಿ ನಡೆದಿದೆ. ಟ್ವಿಟರ್​ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಅತಿರೇಕದ ವರ್ತನೆ ಎಂದು ನೆಟ್ಟಿಗರು ಕಿಡಿಕಾರಿದ್ಧಾರೆ.
A person was attacked by Prabhas fans for sitting in a seat allocated to Lord Hanuman in Bramarambha theatre Hyderabad in the early hours of this morning. (Audio muted due to abusive words)#Prabhas#PrabhasFans#Adipurush#AdipurushReviewpic.twitter.com/2dkUhQFNVi
— Kartheek Naaga (@kartheeknaaga)June 16, 2023
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
