ಹೈದರಾಬಾದ್​:ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಸೂರ್ಯಪೇಟ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಪೊಲೀಸರು ಓರ್ವ ಸಾಫ್ಟ್​ವೇರ್​ ಇಂಜಿನಿಯರ್​ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದವರನ್ನು ಸಂತೋಷ್​ ಎಂದು ಗುರುತಿಸಲಾಗಿದ್ದು, ಇವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಂಧಿತರು ಕೃಷ್ಣ, ಮಣದೀಪ್​, ಮಹೇಶ್​, ಪ್ರೇಮ್​ ನಾಯ್ಡು ಎಂದು ತಿಳಿದು ಬಂದಿದೆ. ಹಣ ಕೊಡುವ ವಿಚಾರವಾಗಿ ಸಂತೋಷ್​ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ಧಾರೆ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಗಾಯಾಳು ಸಂತೋಷ್​ ಹಾಗೂ ಬಂಧಿತ ಆರೋಪಿ ಕೃಷ್ಣ ಇಬ್ಬರು ಸ್ನೇಹಿತರಾಗಿದ್ದು, ಹಣಕಾಸಿನ ವಿಚಾರವಾಗಿ ವೈಷಮ್ಯ ಬೆಳೆದಿತ್ತು. ಸಂತೋಷ್ ಈ ಹಿಂದೆ​ ಕೃಷ್ಣನ ಮೇಲೆ ಎರಡು ಬಾರಿ ಕೊಲೆ ಯತ್ನ ನಡಿಸಿದ್ದ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ಲುಂಗಿ ಲೀಡರ್​ ಅನ್ನೋದನ್ನ ಕಾಂಗ್ರೆಸ್​ ಮರೆಯಬಾರದು: ಪ್ರಲ್ಹಾದ್​ ಜೋಶಿ
ಸಂತೋಷ್ ಪರಿಚಯಸ್ಥರಿಂದ ಕೃಷ್ಣನಿಗೆ 10 ಸಾವಿರ ರೂಪಾಯಿ ಹಣವನ್ನು ಸಾಲವನ್ನಾಗಿ ಕೊಡಿಸಿದ್ದ. ಕೆಲವು ದಿನಗಳ ನಂತರ ಹಣವನ್ನು ಹಿಂತಿರುಗಿಸುವಂತೆ ಹೇಳಿದ್ದ, ಆದರೆ, ಕಾರಣಾಂತರಗಳಿಂದ ಪಡೆದುಕೊಂಡಿದ್ದ ಹಣ ವಾಪಸ್​ ಮಾಡದೆ ಕೃಷ್ಣ ಕಾಲಾವಕಾಶ ಕೇಳಿದ್ದ. ಇದರಿಂದ ಕುಪಿತಗೊಂಡಿದ್ದ ಸಂತೋಷ್ ಕೃಷ್ಣ ಮೇಲೆ ಕೊಲೆ ಯತ್ನ ನಡೆಸಿ ಹೈದರಾಬಾದಿಗೆ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಎರಡು ವರ್ಷಗಳ ನಂತರ ಸೂರ್ಯಪೇಟ್​ಗೆ ವಾಪಸ್​ ಆದ ಬಳಿಕ ಸಂತೋಷ್​ ಕೃಷ್ಣನಿಗೆ ಹಣ ಹಾಗೂ ತನ್ನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದ. ಇದರಿಂದ ತೀವ್ರ ಸಿಟ್ಟಿಗೆದ್ದಿದ್ದ ಕೃಷ್ಣ ಪ್ರಕರಣ =ದ ಇನ್ನಿತರೆ ಆರೋಪಿಗಳ ಜೊತೆಗೂಡಿ ಸಂತೋಷ್​ನನ್ನು ಮುಗಿಸಲು ಸಂಚು ರೂಪಿಸಿದ್ದ.
ಅದರಂತೆ ಸೂರ್ಯಪೇಟ್​ನ ಜನನಿಬಿಡ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಆರೋಪಿಗಳು ಸಂತೋಷ್​ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
