ಅಮೃತಸರ:ಗುರುದ್ವಾರ ಕೊತ್ವಾಲಿ ಸಾಹಿಬ್ ಗರ್ಭಗುಡಿಗೆ ನುಗ್ಗಿ ವ್ಯಕ್ತಿ ಒಬ್ಬ ಗುರುಗುಳ ಮೇಲೆ ದಾಳಿ ಮಾಡಿ ‘ಗುರು ಗ್ರಂಥ್​ ಸಾಹಿಬ್​’ ಗ್ರಂಥವನ್ನು ಅಪವಿತ್ರಗೊಳಿಸಿರುವ ಘಟನೆ ಪಂಜಾಬ್​ನ ಮೊರಿಂಡಾದಲ್ಲಿ ನಡೆದಿದೆ.
ಮೊರಿಂಡಾದ ಗುರುದ್ವಾರ ಕೊತ್ವಾಲಿ ಸಾಹಿಬ್​ನಲ್ಲಿ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಸಾಕಷ್ಟು ಖಂಡನೆ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ವ್ಯಕ್ತಿಯೋರ್ವ ದಿಢೀರನೇ ಗುರದ್ವಾರ ಕೊತ್ವಾಲಿ ಸಾಹಿಬ್ ಗರ್ಭಗುಡಿ ಒಳಗೆ ಪ್ರವೇಶಿಸಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸುತ್ತಾನೆ. ಕೂಡಲೇ ಸ್ಥಳೀಯರು ಆತನನ್ನು ಹಿಡಿದು ಆಡಳಿತ ಮಂಡಳಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:VIDEO| #MeToo ಪ್ರತಿಭಟನೆ; ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಪ್ರಕರಣ
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನವನೀತ್​ ಸಿಂಗ್​ ಮಹಲ್​ ವ್ಯಕ್ತಿ ಓರ್ವ ದಿಢೀರನೆ ಗುರುದ್ವಾರಕ್ಕೆ ನುಗ್ಗಿ ಅಲ್ಲಿದ್ದ ಗ್ರಂಥಿಸ್​ ,ಮೇಲೆ ಹಲ್ಲೆ ನಡೆಸಿ ಗುರು ಗ್ರಂಥ್​ ಸಾಹಿಬ್​ನನ್ನು ಅಪವಿತ್ರಗೊಳಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದ್ದು ಇನ್ನಷ್ಟು ವಿವರವನ್ನು ಶೀಘ್ರವೇ ತಿಳಿಸಲಾಗುವುದು ಎಂದಿದ್ಧಾರೆ.
ಇನ್ನು ಘಟನೆ ಕುರಿತು ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ದೆಹಲಿಯ ಬಿಜೆಪಿ ಶಾಸಕ ಮಂಜಿಂದರ್​ ಶಿಂಗ್​ ಸಿರ್ಸಾ ಟ್ವೀಟ್​ ಮಾಡಿ ಎಎಪಿ ಸರ್ಕಾರದ ಸಡಿಲ ಧೋರಣೆಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಅಪರಾಧಿಗೆ ಕಠಿಣ ಕಾನೂನು ಶಿಕ್ಷೆ ನೀಡುವಂತೆ ಒತ್ತಾಯಿಸಿದ್ಧಾರೆ.
Deeply pained to see this video from Gurdwara Sahib in Morinda where the sacrilege incident happened. The current@AAPPunjabGovt has encouraged lawlessness & such incidents with its lax attitude.Their promise of justice in Behbal Kalan incident was also a lie.We need…pic.twitter.com/6X7yaBKFUr

ಇನ್ನು ಈ ಕುರಿತು ಟ್ವೀಟ್​​ ಮಾಡಿರುವ ಪಂಜಾಬ್​ನ ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಇದು ಅತ್ಯಂತ ಖಂಡನೀಯ ಕೃತ್ಯವಾಗಿದ್ದು ಅಪರಾಧಿಯನ್ನು ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
The beadbi incident at Gurdwara Sri Kotwali Sahib in Morinda is highly condemnable.I urge Punjab Police to immediately arrest the perpetrator of this heinous crime and award the strictest punishment possible.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 4 =
Remember me
