ಅಮರಾವತಿ:ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಗೆ ಮಹಿಳೆಯೊಬ್ಬರು ಯಾರದೋ ಕಣ್ಣ ದೃಷ್ಟಿ ಬಿದ್ದಿದೆ ಎಂದು ಕೆಲವು ವಸ್ತುಗಳನ್ನು ಬಳಸಿ ದೃಷ್ಟಿ ತೆಗೆದು ರಸ್ತೆಗೆ ಎಸೆದಿದ್ದು, ಇದರಿಂದ ಕೋಪಗೊಂಡ ಗ್ರಾಮಸ್ಥರು ಇಬ್ಬರು ಮಹಿಳೆಯರು ಮತ್ತು ಆತನನ್ನು ಮನೆಯಿಂದ ಹೊರಗೆಳೆದು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ನಂತರ ಗ್ರಾಮದಿಂದ ಆ ಮೂವರನ್ನು ಹೊರಹಾಕಿದ್ದು, ವ್ಯಕ್ತಿ ಮರದ ಕೆಳಗೆ ಮೃತಪಟ್ಟಿರುವ ಮನಕಲಕುವ ಘಟನೆ ಆಂಧ್ರದ ಮೇದಕ್ ಜಿಲ್ಲೆಯ ಗೊಲ್ಲಗುಡೆಂನಲ್ಲಿ ನಡೆದಿದೆ.
ಇದನ್ನೂ ಓದಿ:ತೆಲುಗು ರಾಜ್ಯಗಳಲ್ಲಿ ಪ್ರವಾಹ.. ಕೋಟಿ ದೇಣಿಗೆ ನೀಡಿದ ಮೆಗಾಸ್ಟಾರ್ ಚಿರಂಜೀವಿ
ಮೆದಕ್ ಪಟ್ಟಣದ ರಾಮುಲು (65) ಇದೇ ತಿಂಗಳ 1ರಂದು ಸಂಗಾರೆಡ್ಡಿ ಜಿಲ್ಲೆ ಬಾಚಿಪಲ್ಲಿಯ ಪರಿಚಿತ ಬಾಲಾಮಣಿ ಎಂಬಾಕೆಯೊಂದಿಗೆ ಗೊಲ್ಲಗುಡೆಂನ ಗಂಗಮ್ಮ ಎಂಬಾಕೆಯ ಮನೆಗೆ ಬಂದಿದ್ದರು. ರಾಮುಲುರನ್ನು ಸೆ.2ರಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಕರೆತರಲಾಗಿತ್ತು. ಆದರೆ, ಆತನ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ರಾಮುಲುಗೆ ತಟ್ಟೆಯಲ್ಲಿ ಕೆಲವು ವಸ್ತುಗಳನ್ನು ಹಾಕಿ ದೃಷ್ಟಿ ತೆಗೆದ ಬಾಲಾಮಣಿ ಅವುಗಳನ್ನು ರಸ್ತೆಯಲ್ಲೇ ಇಟ್ಟಿದ್ದರು.
ಇದನ್ನು ಗಮನಿಸಿದ ಸ್ಥಳೀಯರು ಮನೆಯಲ್ಲಿದ್ದ ರಾಮುಲು, ಬಾಲಾಮಣಿ ಹಾಗೂ ಗಂಗಮ್ಮನನ್ನು ಮನಸೋ ಇಚ್ಚೆ ಥಳಿಸಿದ್ದಾರೆ. ಬಳಿಕ ರಾಮುಲು ಜೊತೆ ಊರುಬಿಟ್ಟು ಹೋಗಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಇದರಿಂದ ಭಯಭೀತರಾದ ಆ ಮೂವರು ಸುರಿಯುವ ಮಳೆಯಲ್ಲಿಯೇ ಗ್ರಾಮದ ಹೊರವಲಯದ ಮರದ ಕೆಳಗೆ ಬಂದು ಕುಳಿತಿದ್ದಾರೆ. ಮಳೆಯಲ್ಲಿ ಗಾಯಗೊಂಡು ಕುಳಿತಿದ್ದವರನ್ನು ನೋಡಿ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು 108ರಲ್ಲಿ ಜೋಗಿಪೇಟೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ರಾಮುಲು ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ರಾಮುಲು ಪುತ್ರ ಶಿವಕುಮಾರ್ ಅವರ ಮನವಿ ಮೇರೆಗೆ ಪೊಲೀಸರು ಗ್ರಾಮದ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜೂ.ಎನ್​ಟಿಆರ್​ ‘ದೇವರಾ’ಗೆ ಹೆಚ್ಚಿದ ನಿರೀಕ್ಷೆ: ‘ಚುಟಮಲ್ಲೆ’ ಹಾಡಿಗೆ ಯುವಜನ ಫಿದಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + ten =
Remember me
