ಮುಂಬೈ:ಕಪಾಳಮೊಕ್ಷ ಮಾಡಿದ ಪರಿಣಾಮ ಯುವಕನೊಬ್ಬ ಹಳಿಗಳ ಮೇಲೆ ಬಿದ್ದಿದ್ದು, ಆತನ ಮೇಲೆ ರೈಲು ಹರಿದು ಹೋಗಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಮುಂಬೈ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ದಿನೇಶ್ ರಾಥೋಡ್(26) ಎಂದು ಗುರುತಿಸಲಾಗಿದ್ದು. ಘಟನೆಗೆ ಸಂಬಂಧಿಸಿದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಿನೇಶ್ ಎಂಬಾತ ಸಿಯಾನ್​ ರೈಲು ನಿಲ್ದಾಣದಲ್ಲಿ ನಿಂತಿದ್ದ. ಈ ವೇಳೆ ಅವಿನಾಶ್ ಮಾನೆ(35) ಮತ್ತು ಆತನ ಪತ್ನಿ ಶೀತಲ್ ಮಾನೆ(31) ಸಿಯಾನ್ ನಿಲ್ದಾಣದಲ್ಲಿ ಇಳಿದು ಬೇರೆ ರೈಲಿಗಾಗಿ ಕಾಯುತ್ತಿದ್ದರು.
ಇದನ್ನೂ ಓದಿ:ಅಶ್ಲೀಲ ಚಿತ್ರದ ದೃಶ್ಯ ತೋರಿಸಿ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಧರ್ಮಗುರು ಅಂದರ್​..
ಈ ಘಟನೆ ಭಾನುವಾರ ರಾತ್ರಿ 9:15ರ ಸುಮಾರಿಗೆ ಸಿಯಾನ್ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದ್ದು, ಯಾವುದೋ ಕಾರಣಕ್ಕಾಗಿ ಯುವಕ ಮತ್ತು ಮಹಿಳೆಯ ನಡುವೆ ವಾಗ್ವಾದ ಶುರುವಾಗಿದೆ. ಆಗ ಯುವಕ ಶೀತಲ್​ಳನ್ನ ತಳ್ಳಿದ್ದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಮಹಿಳೆಯು ಯುವಕನ ಮೇಲೆ ಛತ್ರಿಯಿಂದ ಹಲ್ಲೆ ನಡೆಸಿದ್ದು, ಇದೇ ವೇಳೆ ಅವಿನಾಶ್ ಯುವಕನಿಗೆ ಬಲವಾಗಿ ಕಪಾಳಮೋಕ್ಷ ಮಾಡಿದ ಇದರಿಂದ ಆತ ಸಮತೋಲನ ತಪ್ಪಿ ಹಳಿಗಳ ಮೇಲೆ ಬಿದ್ದಿದ್ದಾನೆ.
ಕೂಡಲೇ ಯುವಕ ಪ್ಲಾಟ್​ಫಾರ್ಮ್ ಏರಲು ಪ್ರಯತ್ನಿಸಿದ್ದು. ಈ ವೇಳೆ ಬಂದ ರೈಲು ಆತನ ಮೇಲೆ ಹರಿದಿದೆ. ಈ ವೇಳೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ದಂಪತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಸಾಕ್ಷಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಅವಿನಾಶ್ ಮತ್ತು ಪತ್ನಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 4 =
Remember me
