ಲಖನೌ:ಬಾಲಿವುಡ್​ ನಟ, ಸಂಸದ ಸನ್ನಿ ಡಿಯೋಲ್​-ಅಮೀಶಾ ಪಟೇಲ್​ ಅಭಿನಯದ ಗದರ್​-2 ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಬಿಡುಗಡೆಯಾದ ನಾಲ್ಕು ದಿನಗಳಲ್ಲೇ 93 ಲಕ್ಷ ಟಿಕೆಟ್​ಗಳು ಮಾರಾಟವಾಗುವ ಮೂಲಕ 152 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಇದೀಗ ಗದರ್​-2 ಚಿತ್ರ ವೀಕ್ಷಿಸುವ ವೇಳೆ ವ್ಯಕ್ತಿಗಳಿಬ್ಬರ ನಡುವೆ ಪ್ರೇಕ್ಷಕರಿಬ್ಬರ ನಡುವೆ ಗಲಾಟೆಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಬೆಲ್ಟ್​ ಹಾಗೂ ಬೂಟ್​ ಕಾಲಿನಲ್ಲಿ ಥಳಿಸಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಕೊತ್ವಾಲಿ ಎಂಬ ಪ್ರದೇಶದಲ್ಲಿ ನಡೆದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕೊತ್ವಾಲಿ ಪೊಲೀಸ್​ ಠಾಣೆಯ ಅಧಿಕಾರಿಯೊಬ್ಬರು ಪ್ರಸಾದ್​ ಚಿತ್ರಮಂದಿರಲ್ಲಿ ಭಾನುವಾರ ರಾತ್ರಿ 11 ಘಂಟೆ ಸುಮಾರಿಗೆ ಘಟನೆ ನಡೆದಿದ್ದು, ಯಾವ ಕಾರಣಕ್ಕಾಗಿ ಜಗಳವಾಗಿದೆ ಎಂಬುದು ಬಹಿರಂಗವಾಗಿಲ್ಲ. ಹಲ್ಲೆಗೊಳಗಾದ ಯುವಕನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
बरेली में गदर 2 फिल्म देखने के दौरान जमकर हुआ हंगामा ।फिल्म देखने आए दर्शक के साथ हुई मारपीट।शहर कोतवाली क्षेत्र के प्रसाद टॉकीज का है मामला।pic.twitter.com/X0fNf6BDJc
ಇದನ್ನೂ ಓದಿ:ದೆಹಲಿಯ ಸ್ವಾತಂತ್ರ್ಯ ದಿನಾಚರಣೆ ವೀಕ್ಷಣೆಗೆ ಕರ್ನಾಟಕದ 31 ಜನರಿಗೆ ವಿಶೇಷ ಆಹ್ವಾನ
ಆರೋಪಿ ಹಾಗೂ ಹಲ್ಲೆಗೊಳಗಾದ ಯುವಕ ಕುಡಿದ ಮತ್ತಿನಲ್ಲಿದ್ದ ಕಾರಣ ಚಿತ್ರ ವೀಕ್ಷಿಸುವ ವೇಳೆ ವಿಚಾರ ಒಂದಕ್ಕೆ ಇಬ್ಬರ ನಡುವೆ ಗಲಾಟೆಯಾಗಿ ಮಾತಿನ ಚಕಮಕಿ ಏರ್ಪಟ್ಟಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕಾರಣ ಆರೋಪಿಯೂ ಏಕಾಏಕಿ ಯುವಕನನ್ನು ಬೆಲ್ಟ್​ ಹಾಗೂ ಬೂಟ್​ಕಾಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಹಲ್ಲೆಗೊಳಗಾದ ಯುವಕ ನೀಡಿರುವ ಹೇಳಿಕೆಯ್ನೂ ಆಧರಿಸಿ ಪ್ರದೇಶದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಿ ಆರೋಪಿಯನ್ನೂ ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಕೊತ್ವಾಲಿ ಪೊಲೀಸ್​ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 19 =
Remember me
