ನವದೆಹಲಿ:ಪ್ರಾಣಿಸಹಜವಾದ ನಡವಳಿಕೆಯಿಂದ ಸ್ವಲ್ಪ ಗುದ್ದಿದ್ದಕ್ಕೆ ಕರುವೊಂದನ್ನು ಹೊಡೆದು – ಒದ್ದು, ನಂತರ ಇಟ್ಟಿಗೆಯಿಂದಲೂ ಥಳಿಸಿದ ಮಹಾನುಭಾವ ಈಗ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:VIDEO: ಅಯ್ಯೋ ಈ ಸಿಂಹ ನಿಮ್ಗೆ ಏನೂ ಮಾಡಲ್ಲ… ಹೆದರಿಕೊಳ್ಬೇಡಿ… ಅಂದ್ರೆ ನಂಬಿಬಿಡ್ತೀರಾ?
ಪೂರ್ವದೆಹಲಿಯ ವೆಸ್ಟ್ ವಿನೋದನಗರದಲ್ಲಿ ಮಂಗಳವಾರ ಕಮಲ್ ಎಂಬುವ ದಾರಿಯಲ್ಲಿ ಹಾದುಹೋಗುತ್ತಿದ್ದಾಗ ಕರುವೊಂದು ಅಚಾನಕ್ಕಾಗಿ ಪಕ್ಕದಿಂದ ಗುಮ್ಮಿತು. ಇದರಿಂದ ಶಾಕ್ ಆಗಿ ಆತ ಕೈಯಲ್ಲಿದ್ದ ಕವರ್ ಕೆಳಗೆ ಬೀಳಿಸಿಕೊಂಡ. ತಕ್ಷಣ ಕರುವಿಗೆ ಬೂಟುಕಾಲಿನಿಂದ ಒದ್ದು ಮನಬಂದಂತೆ ಹೊಡೆಯಲು ಆರಂಭಿಸಿದ. ನಂತರ ಬಿದ್ದ ಕವರ್ ಇತ್ಯಾದಿಯನ್ನು ಎತ್ತಿಕೊಳ್ಳುತ್ತಾ ಪಕ್ಕದಲ್ಲಿ ಕಂಡ ಇಟ್ಟಿಗೆಯನ್ನೂ ಕೈಗೆತ್ತಿಕೊಂಡು ಕರುವನ್ನು ಚಚ್ಚಲಾರಂಭಿಸಿದ. ಕರು ಸುಸ್ತಾಗಿ ಕೆಳಗೆ ಕುಸಿಯಿತು. ಆತ ಏನೂ ಆಗಿಲ್ಲವೆಂಬಂತೆ ಮುಂದೆ ಸಾಗಿದ.
ಇದನ್ನೂ ಓದಿ:‘ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ?’
ಕರು ಬಾಲಿಶವಾಗಿ ಈ ವ್ಯಕ್ತಿಗೆ ಗುದ್ದಿದ್ದು, ನಂತರ ಆತ ಅದನ್ನು ಥಳಿಸಿದ್ದು ಎಲ್ಲವೂ ರಸ್ತೆಯ ಸಿಸಿಟಿವಿಯಲ್ಲಿ ಖೈದಾಯಿತು. ಈ ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಮಂಡಾವಲಿ ಠಾಣೆ ಪೋಲೀಸರು ಪ್ರಾಣಿ ರಕ್ಷಣಾ ಕಾಯ್ದೆಯಡಿ ಕ್ರೌರ್ಯ ಎಸಗಿದ್ದಕ್ಕೆ ಕಮಲ್​ನನ್ನು ಬಂಧಿಸಿದರು. ಕರುವನ್ನು ವೈದ್ಯಕೀಯ ಶುಶ್ರೂಷೆಗಾಗಿ ಸಂಜಯ ಗಾಂಧಿ ಆಸ್ಪತ್ರೆಗೆ ಕರೆದೊಯ್ದರು.
ನಡುರಸ್ತೆಯಲ್ಲಿ ಕರುವಿನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ ವ್ಯಕ್ತಿpic.twitter.com/DCShG7pil0
— Vijayavani (@VVani4U)January 6, 2021

ಕಬ್ಬಿನ ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!

ಪಕ್ಕದ ಮನೆಯವನೊಂದಿಗೇ ಮಹಿಳೆಯ ಲವ್ವಿ ಡವ್ವಿ! ಪ್ರಿಯಕರನ ಕಾಟ ಹೆಚ್ಚಾದ ತಕ್ಷಣ ದರೋಡೆಯ ನಾಟಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 12 =
Remember me
