ಗುರುಗ್ರಾಮ:ನಾಯಿಯನ್ನು ನಾಯಿ ಎಂದರೆ ಏನು ತಪ್ಪು? ಹಾ.. ಹಾಗೆಂದು ನಾಯಿ ಸಾಕಿದವರ ಮುಂದೆ ಹೋಗಿ “ನಿಮ್ಮ ನಾಯಿ..” ಎಂದು ಕರೆದುಬಿಟ್ಟಿರಿ ಹುಷಾರ್​! ಏಕೆಂದರೆ ನಾಯಿಯನ್ನು ನಾಯಿ ಎಂದು ಕರೆದಿದ್ದಕ್ಕೆ ಅದರ ಮಾಲೀಕ ನೆರೆ ಮನೆಯವರ ಮೇಲೆ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಗುರುಗ್ರಾಮದ ಜ್ಯೋತಿ ಪಾರ್ಕ್​ ನಿವಾಸಿಯಾಗಿರುವ ವ್ಯಕ್ತಿಯೊಬ್ಬ ನಾಯಿ ಸಾಕಿದ್ದಾನೆ. ಅದಕ್ಕೆ ಟಾಮಿ ಎನ್ನುವ ಹೆಸರನ್ನಿಟ್ಟು ಸಲಹುತ್ತಿದ್ದಾನೆ. ಪ್ರತಿದಿನ ಅದರ ವಾಕಿಂಗ್​ ಮಾಡಿಸುವುದನ್ನು ಮರೆಯುವುದಿಲ್ಲವಂತೆ. ಆದರೆ ಆ ನಾಯಿ ಅಕ್ಕ ಪಕ್ಕದ ಮಕ್ಕಳ ಮೈ ಮೇಲೆ ಎಗರಲು ಪ್ರಯತ್ನಿಸುತ್ತಿತ್ತಂತೆ. ಅದೇ ಕಾರಣಕ್ಕೆ ಆತನ ನೆರೆ ಮನೆ ನಿವಾಸಿ ಸುಧೀರ್​ ಒಂದು ಸಲಹೆ ನೀಡಿದ್ದಾನೆ. ನಿಮ್ಮ ನಾಯಿಗೆ ಚೈನ್​ ಹಾಕಿಕೊಂಡು ವಾಕಿಂಗ್​ ಕರೆದುಕೊಂಡು ಹೋಗಿ ಎಂದಿದ್ದಾನೆ.
ಸುಧೀರ್​ನ ಒಂದೇ ಒಂದು ಮಾತಿಗೆ ನಾಯಿ ಮಾಲೀಕ ಸಿಟ್ಟಾಗಿದ್ದಾನೆ. ಚೈನ್​ ಹಾಕು ಎಂದಿದ್ದಕ್ಕಿಂತ ಟಾಮಿಯನ್ನು ನಾಯಿ ಎಂದಿದ್ದಕ್ಕೆ ಆತನಿಗೆ ಸಿಟ್ಟು ಹೆಚ್ಚಾಗಿತ್ತಂತೆ. ಅದೇ ವಿಚಾರದಲ್ಲಿ ಅವರಿಬ್ಬರ ನಡುವೆ ವಾಕ್​ ಸಮರ ನಡೆದಿದೆ. ಅದು ಹೆಚ್ಚಾಗಿದ್ದು, ನಾಯಿ ಮಾಲೀಕ ಸುಧೀರ್​ ಮತ್ತು ಆತನ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆ. ಹೆಂಗಸರು ಮಕ್ಕಳು ಸೇರಿ ಒಟ್ಟು ಆರು ಮಂದಿಯ ಮೇಲೆ ಆತ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಚಾರದಲ್ಲಿ ಸುಧೀರ್​ ಗುರುಗ್ರಾಮ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಕೂಡಿಟ್ಟ ಹಣವನ್ನು ಕೋವಿಡ್​ ಪರಿಹಾರ ನಿಧಿಗೆ ಕೊಟ್ಟಿದ್ದ ಬಾಲಕನಿಗೆ ಸರ್ಪೈಸ್​ ಕೊಟ್ಟ ಸಿಎಂ

ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳಲ್ಲಿ 26 ಸೋಂಕಿತರ ಸಾವು! ಹೈ ಕೋರ್ಟ್​ ತನಿಖೆಗೆ ಒತ್ತಾಯಿಸಿದ ಆರೋಗ್ಯ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 16 =
Remember me
