ಭದ್ರಕ್​:ಆತ ಕುಡಿತದ ಅಮಲಿನಲ್ಲಿದ್ದ. ಅದೇ ಮತ್ತಿನಲ್ಲಿ ರಾತ್ರಿ ತಡವಾಗಿ ಮನೆಗೆ ಬಂದಿದ್ದ. ಬಾಗಿಲು ಬಡಿದು ಹೆಂಡ್ತಿಯನ್ನು ಕೂಗಿದ್ದ. ಆತನ ಅರಚಾಟಕ್ಕೆ ಬೆದರಿದ ಹೆಂಡ್ತಿ ಬಾಗಿಲು ತೆರೆದಿದ್ದಾಳೆ. ಅಬೋಧಾವಸ್ಥೆಯಲ್ಲೇ ಮನೆಯೊಳಗೆ ಹೋದ ಆತ, ಮಾವಿನ ಹಣ್ಣು ಕೊಡು ತಿನ್ನೋಕೆ ಅಂತ ಕೇಳಿದ್ದ. ಮಾವಿನ ಹಣ್ಣು ಇಲ್ಲ ಎನ್ನುವ ಉತ್ತರ ಕೇಳಿ ಕೆಂಡಾಮಂಡಲವಾದ ಆ ಕುಡುಕ ಪತಿ ಬಿದುರಿನ ಬೆತ್ತ ಕೈಗೆತ್ತಿಕೊಂಡು ಹೆಂಡ್ತಿಗೆ ಹೊಡೆಯಲಾರಂಭಿಸಿದ. ಯಾವ ಮಟ್ಟಿನ ಪೆಟ್ಟಾಗಿತ್ತು ಅದು ಎಂದರೆ ಹೆಂಡ್ತಿ ಜೋರಾಗಿ ಕಿರುಚುತ್ತಲೇ ಪ್ರಾಣ ಬಿಟ್ಟಿದ್ದಳು!
ಘಟನೆಯ ವಿವರ ಹೀಗಿದೆ:ಒಡಿಶಾದ ಭದ್ರಕ್ ಜಿಲ್ಲೆಯ ಜಲಮುಂಡ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದ ಘಟನೆ ಇದು. ಕಾರ್ತಿಕ್​ ಜೆನಾ ಆರೋಪಿ. ಆತ ಸೋಮವಾರ ರಾತ್ರಿ ಕಂಠಮುಟ್ಟ ಕುಡಿದು ಮನೆಗೆ ಬಂದಿದ್ದ. ತಡರಾತ್ರಿ ಆಗಿತ್ತು ಆಗ. ತಿನ್ನೋದಕ್ಕೆ ಮಾವಿನ ಹಣ್ಣು ಕೊಡು ಅಂತ ಪತ್ನಿಯನ್ನು ಕೇಳಿದ್ದ. ಮಕ್ಕಳು ಮಾವಿನ ಹಣ್ಣು ಎಲ್ಲವನ್ನೂ ತಿಂದು ಮುಗಿಸಿದ್ದಾರೆ. ಏನೂ ಉಳಿದಿಲ್ಲ ಎಂಬ ಉತ್ತರವನ್ನು ಪತ್ನಿ ಕೊಟ್ಟಳು. ಅಷ್ಟೇ ಸಾಕಾಯಿತು ಕಾರ್ತಿಕ್ ಜೆನಾ ಕೋಪ ನೆತ್ತಿಗೇರಿತ್ತು. ಅಲ್ಲೆ ಇದ್ದ ಬಿದುರಿನ ಬೆತ್ತ ತೆಗೆದುಕೊಂಡು ಹೆಂಡ್ತಿಗೆ ಹೊಡೆಯಲಾರಂಭಿಸಿದ. ಬೇಡ ಹೊಡಿಬೇಡ ಎಂದರೂ ಕೇಳಲಿಲ್ಲ. ಆ ಅರಚಾಟಕ್ಕೆ ಅಕ್ಕಪಕ್ಕದ ಮನೆಯವರೆಲ್ಲ ಧಾವಿಸಿದಾಗ ಆಕೆ ಅಬೋಧಾವಸ್ಥೆ ತಲುಪಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಅಷ್ಟು ಹೊತ್ತಿಗಾಗಲೇ ಆಕೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಇದನ್ನೂ ಓದಿ:ಐವರಲ್ಲಿ ಒಬ್ಬರಿಗೆ ಕೋವಿಡ್ 19 ರಿಸ್ಕ್​ ಭಾರಿ ಅಪಾಯಕಾರಿ- ಲ್ಯಾನ್ಸೆಟ್ ಗ್ಲೋಬಲ್​ ಹೆಲ್ತ್​ ವರದಿ
ಧಾಮ್​ ನಗರ್ ಆಸ್ಪತ್ರೆ ವೈದ್ಯರು ಅದನ್ನು ದೃಢೀಕರಿಸಿದ್ದು, ಪೊಲೀಸರು ಕೇಸ್ ದಾಖಲಿಸಿದ್ದಾರೆ. ಆರೋಪಿ ಜೆನಾನನ್ನು ಮಂಗಳವಾರ ಬೆಳಗ್ಗೆ ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಹೆಚ್ಚುವರಿ ಎಸ್​ಪಿ ಕೈಲಾಶ್ ಚಂದ್ರ ಪರಿದಾ ಹೇಳಿದ್ದಾರೆ. (ಏಜೆನ್ಸೀಸ್)
ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
