ನವದೆಹಲಿ:ದೇಶದ ಗಮನಸೆಳೆದ ಉತ್ತರ ಪ್ರದೇಶದ ಕಾನ್ಪುರ ಸಮೀಪ ನಡೆದ ಎನ್​ಕೌಂಟರ್​ನಲ್ಲಿ ಎಂಟು ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್​​ಸ್ಟರ್ ವಿಕಾಸ್ ದುಬೆ ಯಾರು? ಆತನ ಹಿನ್ನೆಲೆ ಏನು? ಎಂಬಿತ್ಯಾದಿ ಸಹಜ ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಉತ್ತರ ಪ್ರದೇಶದಲ್ಲಿ ಹಲವು ಹೈ ಪ್ರೊಫೈಲ್ ಹತ್ಯೆ ಪ್ರಕರಣಗಳಲ್ಲಿ ಬೇಕಾದ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ ಗ್ಯಾಂಗ್​​ಸ್ಟರ್ ವಿಕಾಸ್ ದುಬೆ. 2001ರಲ್ಲಿ ಬಿಜೆಪಿ ನಾಯಕ ಸಂತೋಷ್ ಶುಕ್ಲಾ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಮುಂಚೂಣಿಗೆ ಬಂತು. ಈ ಸಂಬಂಧ ಶಿವ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹತ್ಯೆ ನಡೆದ ಸಂದರ್ಭದಲ್ಲಿ ಶುಕ್ಲಾ ಬಿಜೆಪಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು.
ಇದನ್ನೂ ಓದಿ:ಪಶ್ಚಿಮ ವಿಭಾಗದಲ್ಲಿ ಹತ್ತು ಠಾಣೆಗಳು ಸೀಲ್​ಡೌನ್
ಆದಾಗ್ಯೂ, ಈ ಕೊಲೆ ಪ್ರಕರಣದಲ್ಲಿ ಗ್ಯಾಂಗ್​​ಸ್ಟರ್ ದುಬೆಯ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ನಿರ್ದೋಷಿ ಎಂದು ಸೆಷೆನ್ಸ್ ಕೋರ್ಟ್​ ಘೋಷಿಸಿತ್ತು. ಈತ ಬಿಕ್ರು ಗ್ರಾಮದ ನಿವಾಸಿ. ಹಲವಾರು ರಾಬರಿ, ಕಿಡ್ನಾಪ್​ ಮತ್ತು ಹತ್ಯೆ ಪ್ರಕರಣಗಳ ಆರೋಪಿ. ದುಬೆ 2000ನೇ ಇಸವಿಯಲ್ಲಿ ಸಿದ್ಧೇಶ್ವರ ಪಾಂಡೆ ಎಂಬ ತಾರಾಚಾಂದ್ ಇಂಟರ್ ಕಾಲೇಜಿನ ಅಸಿಸ್ಟೆಂಟ್ ಮ್ಯಾನೇಜರ್​/ಪ್ರಿನ್ಸಿಪಾಲ್ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದ.
ಇದನ್ನೂ ಓದಿ:ನ್ಯಾಯಾಲಯಗಳ ರಜೆ ಆ.7ರವರೆಗೆ ವಿಸ್ತರಣೆ
ಸ್ಥಳೀಯ ನಿವಾಸಿಯೊಬ್ಬರು ದುಬೆ ವಿರುದ್ಧ ಕೊಲೆಯತ್ನದ ದೂರು ದಾಖಲಿಸಿದ ಕಾರಣ ಗುರುವಾರ ರಾತ್ರಿ ಆತನನ್ನು ಬಂಧಿಸುವುದಕ್ಕಾಗಿ ಪೊಲೀಸರು ತೆರಳಿದ್ದರು. ಇದೇ ವೇಳೆ ದುಬೆ ಬೆಂಬಲಿಗರು ನಡೆಸಿದ ದಾಳಿಗೆ ಪೊಲೀಸರು ಬಲಿಯಾಗಿದ್ದಾರೆ. ಹತ್ಯೆ ಪ್ರಕರಣದ ವಿವರಕ್ಕೆ ಈ ವರದಿ ಓದಿ:
ಕಾನ್ಪುರದಲ್ಲಿ ಡಿವೈಎಸ್​ಪಿ ಸೇರಿ 8 ಪೊಲೀಸರು ಹುತಾತ್ಮ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 × three =
Remember me
