ಪಿಂಪ್ರಿ:ಕತ್ತು ಕಚ್ಚಿ ರಕ್ತ ಕುಡಿಯಲು ಮುಂದಾದ ಯುವಕನ ಪ್ರಾಣವನ್ನು ಆತನ ಗೆಳೆಯನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಯಲ್ಲಿ ನಡೆದಿದೆ.ಇದನ್ನೂ ಓದಿ:ಪತಿ ಲಂಚ ಪಡೆದಿದ್ದಕ್ಕೆ ಮೇಯರ್ ಸ್ಥಾನದಿಂದ ಪತ್ನಿ ವಜಾ..ಇಶ್ತಿಯಾಕ್ ಖಾನ್ ಮೃತ ದುರ್ದೈವಿಯಾಗಿದ್ದು, ರಾಹುಲ್ ಲೋಹರ್ ಎಂಬಾತನೇ ಆತನನ್ನು ಬರ್ಬರವಾಗಿ ಕೊಲೆಗೈದ ಆರೋಪಿಯಾಗಿದ್ದಾನೆ. ಇಬ್ಬರು ತಮ್ಮ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ ಬಳಿಕ ಈ ಘಟನೆ ನಡೆದಿದೆ. ಇಬ್ಬರು ತಮ್ಮ ಸ್ನೇಹಿತರೊಂದಿಗೆ ಕೂಡಿಕೊಂಡು ಮದ್ಯ ಸೇವಿಸಿದ್ದರು. ಕುಡಿದ ಅಮಲಿನಲ್ಲಿ ಇಶ್ತಿಯಾಕ್, ರಾಹುಲ್​ಗೆ ರಕ್ತ ಕುಡಿಸುವಂತೆ ವಿಚಿತ್ರ ಮನವಿ ಮಾಡಿ ಕೂಡಲೇ ಆತನ ಕುತ್ತಿಗೆಗೆ ಕಚ್ಚಿದ್ದಾನೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದು ಮಾರಾಮಾರಿ ನಡೆದಿದ್ದು, ಬಳಿಕ ರಾಹುಲ್ ಅಲ್ಲಿಂದ ನಿರ್ಗಮಿಸಿದ್ದಾನೆ.ಏತನ್ಮಧ್ಯೆ, ಸ್ವಲ್ಪ ಸಮಯದ ನಂತರ ರಾಹುಲ್ ಮತ್ತೆ ಇಶ್ತಿಯಾಕ್​​ನ್ನು ಭೇಟಿಯಾಗಿ, ನೀನು ನನ್ನ ರಕ್ತವನ್ನು ಕುಡಿಯಲು ಬಯಸುತ್ತೀಯಾ? ನಿನ್ನನ್ನು ಬದುಕಲು ಬಿಡುವುದಿಲ್ಲ ಎಂದು ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಕೊನೆಗೆ ಜಗಳದ ನಡುವೆ ಆರೋಪಿಯು, ದೊಡ್ಡ ಕಲ್ಲನ್ನು ಎತ್ತಿ ಹಾಕಿ ತನ್ನ ಸ್ನೇಹಿತನ ತಲೆಯನ್ನು ಒಡೆದು ಹಾಕಿ ಹತ್ಯೆಗೈದಿದ್ದಾನೆ. ಈ ವಿಷಯ ತಿಳಿದ ಪೊಲೀಸರು ಆರೋಪಿ ರಾಹುಲ್ ನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 − one =
Remember me
