ಇಂದೋರ್ (ಮಧ್ಯಪ್ರದೇಶ):ಪತಿಯೊಬ್ಬ ತನ್ನ ಹೆಂಡತಿಯನ್ನು ಇಟ್ಟಿಗೆಯಿಂದ ಅಮಾನುಷವಾಗಿ ಹೊಡೆದು, ಚಾಕುವಿನಿಂದ ಇರಿದು ಬಾಲ್ಕನಿಯಿಂದ ಕೆಳಕ್ಕೆ ತಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ಇಂದೋರ್‌ನಲ್ಲಿ ನಡೆದಿದೆ.
ಇದನ್ನೂ ಓದಿ:ತೆಲುಗು ಚಿತ್ರಗಳಲ್ಲಿ ನಟಿಸ್ತಿಲ್ಲ ಪೂಜಾ ಹೆಗ್ಡೆ..ಅರ್ಧ ಡಜನ್ ಚಿತ್ರಗಳನ್ನು ಕೈಬಿಟ್ಟಿದ್ದರ ಹಿಂದಿದೆ ಆ ಒಂದು ಕಾರಣ?!
ನಗರದ ಬಂಗಾಂಗ ಪ್ರದೇಶದಲ್ಲಿ ಜಿತೇಂದ್ರ ಪರ್ಮಾರ್ ತನ್ನ ಪತ್ನಿ ಪೂಜಾ ಪರಮಾಳನ್ನು ಅಮಾನುಷವಾಗಿ ಹತ್ಯೆ ಮಾಡಲು ಯತ್ನಿಸಿದ್ದು, ಅದರ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಆರೋಪಿ ತನ್ನ ಪತ್ನಿಯ ತಲೆಗೆ ಇಟ್ಟಿಗೆಯಿಂದ ಥಳಿಸುತ್ತಿರುವುದನ್ನು ಕಾಣಬಹುದು. ಆಕೆಗೆ ವಿಪರೀತ ರಕ್ತಸ್ರಾವವಾಗುವವರೆಗೆ ಆ ಪಾಪಿ ಆಕೆಯನ್ನು ಹೊಡೆಯುತ್ತಲೇ ಇದ್ದ. ಸಂತ್ರಸ್ತೆ ತನ್ನನ್ನು ಬಿಟ್ಟು ಬಿಡುವಂತೆ ಪರಿಪರಿಯಾಗಿ ಕೋಳಿಕೊಳ್ಳುವುದನ್ನು ನೋಡಬಹುದಾಗಿದೆ. ಆದರೆ ಆರೋಪಿಯು ಕರುಣೆ ತೋರಿಸಲಿಲ್ಲ. ಅವನು ಆಕೆಯನ್ನು ಬಾಲ್ಕನಿಗೆ ಎಳೆದೊಯ್ದು, ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಲು ಪ್ರಯತ್ನಿಸುತ್ತಾನೆ.
ಸಂತ್ರಸ್ತೆಯನ್ನು ಚಿಂತಾಜನಕ ಸ್ಥಿತಿಯಲ್ಲಿ ಐಸಿಯುಗೆ ದಾಖಲಿಸಲಾಗಿದೆ. ಆರೋಪಿ ಜಿತೇಂದ್ರ ಪರ್ಮಾರ್ ವಿರುದ್ಧ ಬಂಗಾಂಗ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ ಆರೋಪಿಯನ್ನು ಜೈಲಿಗೆ ಕಳುಹಿಸಿದೆ. ಜಿತೇಂದ್ರನ ತಾಯಿ, ಸಹೋದರಿ ಮತ್ತು ಎರಡನೇ ಪತ್ನಿಯ ವಿರುದ್ಧವೂ ಪೊಲೀಸರು ಕೊಲೆ ಯತ್ನ ಆರೋಪ ಮಾಡಿದ್ದಾರೆ.
ಪೊಲೀಸರ ಪ್ರಕಾರ, ಮೂರು ತಿಂಗಳ ಹಿಂದೆ ಜಿತೇಂದ್ರ ಎರಡನೇ ಮದುವೆಯಾಗಿದ್ದ. ಅಂದಿನಿಂದ ಮನೆಗೆ ಬಂದಿರಲಿಲ್ಲ. ಈ ವಿಚಾರವಾಗಿ ಆತನ ಮೊದಲ ಪತ್ನಿ ಪೂಜಾ ಪರಮಾ ನಡುವೆ ಜಗಳ ನಡೆಯುತ್ತಿತ್ತು.
ಮಾಹಿತಿಯ ಪ್ರಕಾರ, ಪೂಜಾ ಪರ್ಮಾರ್ ತನ್ನ ಇಬ್ಬರು ಮಕ್ಕಳೊಂದಿಗೆ ಬಂಗಾಂಗದ ನರ್ವಾರ್‌ನಲ್ಲಿ ವಾಸಿಸುತ್ತಿದ್ದಾರೆ. ಪೂಜಾ ಪೊಲೀಸರಿಗೆ, “ಭಾನುವಾರ ನಾನು ಔಷಧಿ ಸೇವಿಸಿ ಮಲಗಿದ್ದೆ. ಮಕ್ಕಳಿಬ್ಬರೂ ಆಟವಾಡುತ್ತಿದ್ದರು. ಅಷ್ಟರಲ್ಲಿ ಪತಿ ಜಿತೇಂದ್ರ ತನ್ನ ಎರಡನೇ ಪತ್ನಿ ಗಾಯತ್ರಿ, ತಾಯಿ ಬಸಂತಿ ಬಾಯಿ ಮತ್ತು ಸಹೋದರಿ ಪಾಯಲ್ ಅವರೊಂದಿಗೆ ಮನೆಗೆ ಪ್ರವೇಶಿಸಿದರು.
“ಜಿತೇಂದ್ರ ಚಾಕು ಕೈಗೆತ್ತಿಕೊಂಡ. ಅತ್ತೆ, ಅತ್ತಿಗೆ ಮತ್ತು ಗಾಯತ್ರಿ ನನ್ನನ್ನು ಹಿಡಿದರು. ‘ನೀನು ಜಾಸ್ತಿ ಮಾತಾಡ್ತೀಯ, ಇವತ್ತು ಖಂಡಿತ ನಿನ್ನನ್ನು ಸಾಯಿಸುತ್ತೇನೆ’ ಎಂದ ಪತಿ ಹೇಳುತ್ತಾ ನನ್ನ ತಲೆಗೆ ಚಾಕುವಿನಿಂದ ತಿವಿದ. ಬಳಿಕ ನನ್ನ ಎರಡೂ ಕೈಗಳಿಗೆ ಇರಿದ. ಬಳಿಕ ನನ್ನ ಜುಟ್ಟು ಹಿಡಿದು ಎಳೆದುಕೊಂಡು ಬಾಲ್ಕನಿಗೆ ತಂದು ಕೆಳಗೆ ತಳ್ಳಲು ಪ್ರಯತ್ನಿಸಿದ ”ಎಂದು ಪೂಜಾ ದೂರಿದ್ದಾಳೆ.
ರಾಧಿಕಾ ಮರ್ಚೆಂಟ್​ರನ್ನೇ ಆರಿಸಿಕೊಂಡಿದ್ದೇಕೆ? ಬಾಳ ಸಂಗಾತಿ ಬಗ್ಗೆ ನಿಜವಾದ ಕಾರಣ ಬಿಚ್ಚಿಟ್ಟ ಅನಂತ್ ಅಂಬಾನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + thirteen =
Remember me
