ಶ್ರೀನಗರ:ಕಳೆದ ವರ್ಷ ಫೆ. 14ರಂದು 40 ಸಿಆರ್​ಪಿಎಫ್​ ಯೋಧರನ್ನು ಬಲಿ ಪಡೆದುಕೊಂಡ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಶುಕ್ರವಾರ ಬಂಧಿಸಿದೆ.
ಇಬ್ಬರಲ್ಲಿ ಓರ್ವ ಆರೋಪಿ ಕೇಂದ್ರೀಯ ಸಶಕ್ತ ಪೊಲೀಸ್​ ಪಡೆಯ ಬೆಂಗಾವಲು ವಾಹನಗಳ ಮೇಲೆ ದಾಳಿ ಮಾಡಲು ಐಇಡಿ ಬಾಂಬ್​ ತಯಾರಿಕೆಗಾಗಿ ಆನ್​ಲೈನ್​ ಶಾಪಿಂಗ್​ನಿಂದ ರಾಸಾಯನಿಕಗಳನ್ನು ಕೊಂಡುತಂದಿದ್ದ ಎಂಬ ಭಯಾನಕ ಮಾಹಿತಿ ಹೊರಬಿದ್ದಿದೆ.
ಶ್ರೀನಗರದ ವೈಜ್​ ಅಲ್​ ಇಸ್ಲಾಂ(19) ಮತ್ತು ಪುಲ್ವಾಮದ ಮೊಹಮ್ಮದ್​ ಅಬ್ಬಾಸ್​ ರಾಥರ್​(32) ಬಂಧಿತ ಆರೋಪಿಗಳು. ಪುಲ್ವಾಮ ಪ್ರಕರಣದಲ್ಲಿ ಈವರೆಗೆ ಒಟ್ಟು ಐವರು ಆರೋಪಿಗಳನ್ನು ಎನ್​ಐಎ ಬಂಧಿಸಿದೆ.
ಆರಂಭಿಕ ತನಿಖೆಯಲ್ಲಿ ಆರೋಪಿ ಇಸ್ಲಾಂ ಸ್ಪೋಟಕ ಮಾಹಿತಿ ಹೊರಗೆಡವಿದ್ದು, ಐಇಡಿ ಬಾಂಬ್​ ತಯಾರಿಕೆಗೆ ಅಮೇಜಾನ್​ ಆನ್​ಲೈನ್​ ಶಾಪಿಂಗ್​ನಿಂದ ರಾಸಾಯನಿಕಗಳು, ಬ್ಯಾಟರಿಗಳು ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಕೊಂಡುಕೊಂಡಿದ್ದಾಗಿ ಹೇಳಿದ್ದಾನೆ. ಎಲ್ಲವನ್ನು ಪಾಕಿಸ್ತಾನದ ಜೈಷ್​ ಎ ಮೊಹಮ್ಮದ್​(ಜಿಇಎಂ) ಉಗ್ರ ಸಂಘಟನೆಯ ನಿರ್ದೇಶನದಂತೆಯೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಂಚಿನ ಭಾಗವಾಗಿ ವೈಯಕ್ತಿಕವಾಗಿಯೇ ಬಾಂಬ್​ ತಯಾರಿಕೆಯ ಎಲ್ಲ ವಸ್ತಗಳನ್ನು ಕೊಂಡು ಜೆಇಎಂ ಉಗ್ರರಿಗೆ ಆರೋಪಿ ಇಸ್ಲಾಂ ನೀಡಿದ್ದಾನೆ.
ಮತ್ತೋರ್ವ ಆರೋಪಿ ರಾಥರ್​, ಜೆಇಎಂ ಸಂಘಟನೆಯ ಹಳೆಯ ಭೂಗತ ಕೆಲಸಗಾರ. ಜೈಷ್​ ಉಗ್ರರು ಹಾಗೂ ಐಇಡಿ ಪರಿಣಿತ ಮೊಹದ್​ ಉಮರ್​ 2018ರ ಏಪ್ರಿಲ್-ಮೇ​ನಲ್ಲಿ ಕಾಶ್ಮೀರಕ್ಕೆ ಬಂದಿದ್ದಾಗ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಹೀಗೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲದೆ, ಜೈಷ್​ ಇತರೆ ಉಗ್ರರಾದ ಆತ್ಮಾಹುತಿ ಬಾಂಬ್​ ದಾಳಿಕೋರ ಆದಿಲ್​ ಅಹ್ಮದ್​ ದಾರ್, ಸಮೀರ್​ ಅಹ್ಮದ್​ ದಾರ್​ ಮತ್ತು ಕಮ್ರಾನ್​ ಉಗ್ರರಿಗೆ ಪುಲ್ವಾಮ ದಾಳಿಗೂ ಮುನ್ನ ಆಶ್ರಯ ನೀಡಿದ್ದ ಎಂದು ಹೇಳಿದರು.​
ಆರೋಪಿಗಳಾದ ಇಸ್ಲಾಂ ಮತ್ತು ರಾಥರ್​ನನ್ನು ಶನಿವಾರ ಜಮ್ಮುವಿನಲ್ಲಿರುವ ಎನ್​ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eight =
Remember me
