ಪುಣೆ:ಸಂಚಾರಿ ನಿಯಮ ಉಲ್ಲಂಘನೆ ಮಾಡಿದಾಗ ವಾಹನವನ್ನು ನಿಲ್ಲಿಸಿದ ಎಂಬ ಕಾರಣಕ್ಕೆ ಟ್ರಾಫಿಕ್​ ಪೊಲೀಸಿನ ಕೈಯನ್ನು ಕಚ್ಚಿ, ಬೆದರಿಕೆ ಹಾಕಿರುವ ಪ್ರಸಂಗ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ. ಈ ರೀತಿ ವರ್ತಿಸಿದ 29 ವರ್ಷ ವಯಸ್ಸಿನ ಮಂಗೇಶ್​ ಶಮಾಕಾಂತ್​ ಕಾಳೆ ಎಂಬುವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಕಾಳೆ, ಸೋಮವಾರ(ಸೆ.20) ಮಧ್ಯರಾತ್ರಿ ಎರಂಡ್ವಾನಾ ಪ್ರದೇಶದಲ್ಲಿ ತೆರಳುತ್ತಿದ್ದಾಗ ಪೊಲೀಸ್​ ಸಿಬ್ಬಂದಿಯಾದ ಪರಮೇಶ್ವರ್​ ಪದಳೆ ಎಂಬುವರು ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗಾಡಿ ನಿಲ್ಲಿಸಿದರು. ಆಗ ಕೋಪಗೊಂಡು ಅವರ ಮೇಲೆ ಕಲ್ಲೆಸೆದು, ಕೈಯನ್ನು ಕಚ್ಚಿದ್ದ ಆರೋಪಿ, ಕರ್ತವ್ಯನಿರತ ಪೊಲೀಸಿಗೆ ಬೆದರಿಕೆ ಕೂಡ ಹಾಕಿದ ಎನ್ನಲಾಗಿದೆ. ಡೆಕ್ಕನ್​ ಜಿಮ್​ಖಾನ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್)
“ಕೂಸಿಗೆ ಡೈಪರ್​ ಬದಲಿಸುವುದಕ್ಕೂ ಹೆಚ್ಚು ಬಾರಿ ಆಟಗಾರರನ್ನ ಬದಲಾಯಿಸ್ತಾರೆ”

ಕರೊನಾ: ಸಕ್ರಿಯ ಕೇಸುಗಳಲ್ಲಿ ಇಳಿಕೆ; 26,964 ಹೊಸ ಪ್ರಕರಣಗಳು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:15 + 5 =
Remember me
