ಯಾವತ್ಮಲ್​ :ಮಹಾರಾಷ್ಟ್ರದ 24 ವರ್ಷ ವಯಸ್ಸಿನ ಯುವಕನೊಬ್ಬ ಖುದ್ದಾಗಿ ಪುಟ್ಟ ಹೆಲಿಕಾಪ್ಟರ್​ ಒಂದನ್ನು ನಿರ್ಮಿಸಿ ಬರುವ ಸ್ವಾತಂತ್ರ್ಯೋತ್ಸವದಂದು ಊರಿನವರ ಮುಂದೆ ಅನಾವರಣ ಮಾಡಬೇಕೆಂಬ ಕನಸು ಹೊಂದಿದ್ದ. ಆದರೆ ವಿಧಿಯ ಆಟ ನೋಡಿ – ಅವನು ನಿರ್ಮಿಸಿದ ಹೆಲಿಕಾಪ್ಟರ್​ನ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಅದರ ರೋಟಾರ್​ ಬ್ಲೇಡ್​ ಮುರಿದು ಆತನ ಕತ್ತು ಕೊಯ್ದಿತು, ಅವನ ಜೀವಕ್ಕೆ ಅಂತ್ಯ ಹಾಡಿತು.
ಮಹಾರಾಷ್ಟ್ರದ ಯಾವತ್ಮಲ್​ ಜಿಲ್ಲೆಯ ಮಹಾಗಾವ್ ತಹಸೀಲ್​ನಲ್ಲಿರುವ ಫುಲಸಾವಂಗಿ ಗ್ರಾಮದ ನಿವಾಸಿಯಾಗಿದ್ದ ಶೇಖ್​ ಇಸ್ಮಾಯಿಲ್​ ಶೇಖ್ ಇಬ್ರಾಹಿಂ 8ನೇ ತರಗತಿ ವ್ಯಾಸಂಗ ನಿಲ್ಲಿಸಿ ತನ್ನ ಅಣ್ಣನ ಗ್ಯಾಸ್​ ವೆಲ್ಡಿಂಗ್​ ವರ್ಕ್​ಶಾಪ್​ ಸೇರಿದ್ದ. ಅಲ್ಲಿ ಅಲ್ಮಿರಾ, ಕೂಲರ್​ಗಳು ಮತ್ತು ಇತರ ಗೃಹಬಳಕೆ ವಸ್ತುಗಳ ನಿರ್ಮಾಣ ಕಲಿತಿದ್ದ ಆತ ಎರಡು ವರ್ಷದಿಂದ ಹೆಲಿಕಾಪ್ಟರ್​ ನಿರ್ಮಿಸುವ ಪ್ರಯೋಗದಲ್ಲಿ ತೊಡಗಿದ್ದ.
ಇದನ್ನೂ ಓದಿ:ಆಫ್ಘಾನ್​ಗೆ ಭಾರತ ಉಡುಗೊರೆಯಾಗಿ ನೀಡಿದ್ದ ಹೆಲಿಕಾಪ್ಟರ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್..!
ಆಮೀರ್​ ಖಾನ್​ರ 3 ಇಡಿಯಟ್ಸ್​ ಚಿತ್ರದಿಂದ ಪ್ರೇರಿತನಾಗಿದ್ದ ಇಸ್ಮಾಯಿಲ್​, ಯೂಟ್ಯೂಬ್​ ವಿಡಿಯೋಗಳನ್ನು ನೋಡಿ ಅದರ ಡಿಸೈನ್​ ಮತ್ತಿತರ ಅಂಶಗಳನ್ನು ಕಲಿತ. ಸ್ಟೀಲ್​ ಪೈಪ್​ಗಳನ್ನು ಬಳಸಿ ಸಿಂಗಲ್​ ಸೀಟರ್​ ಪ್ರೋಟೋಟೈಪನ್ನು ತಯಾರಿಸಿ, ಅದಕ್ಕೆ ಮಾರುತಿ 800 ಇಂಜಿನ್​ ಅಳವಡಿಸಿ 5 ಅಡಿ ಎತ್ತರದಷ್ಟು ಹಾರಾಟ ಆಗುವಂತೆ ಪ್ರಯೋಗ ಕೂಡ ಮಾಡಿದ್ದ ಎನ್ನಲಾಗಿದೆ.

‘ಮುನ್ನ ಹೆಲಿಕಾಪ್ಟರ್’​ ಎಂದು ತನ್ನ ಅಡ್ಡಹೆಸರನ್ನೇ ಅವನು ನಿರ್ಮಿಸಿದ ಹೆಲಿಕಾಪ್ಟರ್​ಗೆ ಇಟ್ಟಿದ್ದ ಇಸ್ಮಾಯಿಲ್​, ಮಂಗಳವಾರ ರಾತ್ರಿ ವರ್ಕ್​ಶಾಪ್​ನ ಬಳಿ ಅದರ ಅಂತಿಮ ಪರೀಕ್ಷೆ ಮಾಡುತ್ತಿದ್ದ. ಇಂಜಿನ್​ ಆರಂಭವಾದಾಗ ಸ್ನೇಹಿತರು ನೋಡುತ್ತಿರುವಂತೆಯೇ, ಹೆಲಿಕಾಪ್ಟರ್​ನ ಒಂದು ರೋಟಾರ್ ಬ್ಲೇಡ್ ಮುರಿದು ಅವನ ಗಂಟಲನ್ನು ಸೀಳಿತು. ನೆಲಕ್ಕುರುಳಿ, ವಿಪರೀತ ರಕ್ತ ಹರಿಯುತ್ತಿದ್ದ ಇಸ್ಮಾಯಿಲ್​ಅನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಯಾವುದೇ ಚಿಕಿತ್ಸೆ ನೀಡುವ ಮುಂಚೆ ಆತ ಸಾವಪ್ಪಿದ ಎನ್ನಲಾಗಿದೆ.(ಏಜೆನ್ಸೀಸ್)
VIDEO | ಬಿಜೆಪಿ ನಾಯಕರ ‘ದೋಸ್ತಿ’ ಹಾಡು ನೋಡಿ!

ಕೋವಿಶೀಲ್ಡ್​-ಕೋವಾಕ್ಸಿನ್ ಡೋಸ್ ಮಿಕ್ಸ್​ ಮಾಡಬಹುದೇ? ನಡೆಯಲಿದೆ ಅಧ್ಯಯನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − two =
Remember me
