ನವದೆಹಲಿ:ವ್ಯಕ್ತಿಯೊಬ್ಬ ತನ್ನ ಪತ್ನಿಯ ಸ್ಮರಣಾರ್ಥ ದೇವಸ್ಥಾನವೊಂದನ್ನು ನಿರ್ಮಿಸಿ, ನಿತ್ಯವೂ ಆಕೆಯ ಮೂರ್ತಿಗೆ ಪೂಜೆ ಸಲ್ಲಿಸುತ್ತಿರುವ ವಿಶೇಷ ಪ್ರಕರಣವೊಂದು ಇಲ್ಲಿದೆ. ಉತ್ತರಪ್ರದೇಶದ ಫತೇಪುರ್​ ಎಂಬಲ್ಲಿ ಇಂಥದ್ದೊಂದು ದೇವಸ್ಥಾನವಿದೆ.
ರಾಮ್​ಸೇವಕ್​ ಎಂಬಾತ ತನ್ನ ಪತ್ನಿ ಮಾಯಾ ಎಂಬಾಕೆಯ ಸ್ಮರಣಾರ್ಥ ಈ ಸಣ್ಣ ದೇವಸ್ಥಾನ ನಿರ್ಮಿಸಿ ನಿತ್ಯ ಆಕೆಯ ಮೂರ್ತಿಗೆ ಪೂಜೆ ಮಾಡುತ್ತಿದ್ದಾನೆ. ಈತನ ಪತ್ನಿ 2020ರಲ್ಲಿ ಕೋವಿಡ್​ 19ನಿಂದಾಗಿ ಮೃತಪಟ್ಟಿದ್ದಳು. ಆಕೆಯ ಸಾವಿನ ಬಳಿಕ ಈತ ಒಂಟಿತನ ಅನುಭವಿಸಿ ಅನಾರೋಗ್ಯಗೊಂಡಿದ್ದ. ಹೀಗಾಗಿ ಆಕೆಯ ಸ್ಮರಣಾರ್ಥ ಒಂದು ಮೂರ್ತಿಯನ್ನು ಸ್ಥಾಪಿಸುವ ನಿರ್ಧಾರಕ್ಕೆ ಬಂದಿದ್ದ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ತನ್ನ ಮನೆಯಿಂದ 2 ಕಿ.ಮೀ. ದೂರದಲ್ಲಿರುವ ಹೊಲದಲ್ಲಿ ಆರು ತಿಂಗಳ ಹಿಂದೆ ಈತ ಪತ್ನಿಯ ಮೂರ್ತಿಯನ್ನು ಸ್ಥಾಪಿಸಿದ್ದ. ಮಾತ್ರವಲ್ಲ, ಅದನ್ನು ಬರೀ ಮೂರ್ತಿ ಎಂದು ಯಾರಾದರೂ ಹೇಳಿದರೆ ತೀವ್ರ ಬೇಸರಕ್ಕೆ ಒಳಗಾಗುವಷ್ಟು ಅದರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾನೆ. ಆರಂಭದಲ್ಲಿ ಈತನ ಈ ಕಾರ್ಯವನ್ನು ನೋಡಿ ಗ್ರಾಮಸ್ಥರು ತಮಾಷೆ ಮಾಡುತ್ತಿದ್ದರೂ, ಈಗೀಗ ಈತನ ಪ್ರೀತಿ ಹಾಗೂ ಅರ್ಪಣಾ ಮನೋಭಾವವನ್ನು ನೋಡಿ ಗೌರವಿಸಲಾರಂಭಿಸಿದ್ದಾರಂತೆ.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಪತ್ನಿಯ ಮೂರ್ತಿಗೆ ದಿನವೂ ಬೆಳಗ್ಗೆ ಪೂಜೆ ಮಾಡುವ ಈತ ಅಲ್ಲೇ ಒಂದಷ್ಟು ಕಾಲ ಕಳೆಯುತ್ತಾನೆ. ಮೂರ್ತಿಯ ಪಕ್ಕದಲ್ಲಿ ಕುಳಿತು ಮಾತನಾಡುತ್ತಿರುತ್ತಾನೆ, ಮಾತ್ರವಲ್ಲ ಅಲ್ಲೇ ಸಮೀಪದಲ್ಲೇ ಕುಳಿತು ಆಹಾರ ಸೇವಿಸುತ್ತಾನೆ. ಸಾಧ್ಯವಾದಷ್ಟೂ ಸಮಯವನ್ನು ಅಲ್ಲೇ ಕಳೆಯುವ ಈತ, ಅಲ್ಲಿ ಹತ್ತಿರ ಸುಳಿದಾಡುವ ಜನರಿಗೆ ಕುಡಿಯಲು ನೀರು ಸಿಗಲಿ ಎಂದು ಹ್ಯಾಂಡ್ ಪಂಪ್ ಕೂಡ ಅಳವಡಿಸಿದ್ದಾನೆ.
ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?

ಪೋಸ್ಟ್/ಲೈಕ್​ ಮಾಡಿದ್ದಕ್ಕೆ ಸಮಸ್ಯೆಯಾದರೆ ನಿಮ್ಮ ನೆರವಿಗೆ ನಾನಿದ್ದೇನೆ ಎಂದ ಎಲಾನ್​ ಮಸ್ಕ್​: ಯಾರಿಗೆ, ಯಾಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
