ಆಗ್ರಾ:ನಾವು ಕಷ್ಟದಲ್ಲಿರುವಾಗ ದೇವರು ಯಾವುದಾದರು ರೂಪದಲ್ಲಿ ಬಂದು ನಮ್ಮ ಕೈ ಹಿಡಿಯುತ್ತಾನೆ ಎಂಬುದಕ್ಕೆ ಈ ಪ್ರಕರಣ ಜೀವಂತ ಸಾಕ್ಷಿಯಾಗಿದೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಕೆಲ ಕಿಡಿಗೇಡಿಗಳು ಮನಬಂದಂತೆ ಥಳಿಸಿ ಜೀವಂತವಾಗಿ ಸಮಾಧಿ ಮಾಡಿದ್ದರು. ಕೆಲ ಹೊತ್ತಿನ ಬಳಿಕ ರಕ್ತದ ವಾಸನೆಗೆ ಈ ಸ್ಥಳಕ್ಕೆ ಬಂದ ಬೀದಿ ನಾಯಿಗಳು ಮಣ್ಣನ್ನು ಅಗೆಯುವ ಮೂಲಕ ಯುವಕನನ್ನು ಎಚ್ಚರ ಗೊಳಿಸಿ ಆತನಿಗೆ ಪ್ರಾಣಪಾಯದಿಂದ ಪಾರು ಮಾಡಿದ್ದಾವೆ. ಈ ಘಟನೆಯು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಘಟನೆ ಜುಲೈ 18ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವಕ ರೂಪ್​ ಕಿಶೋರ್​ನನ್ನು ಮನಬಂದಂತೆ ಥಳಿಸಿ ಆತನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ನಡೆಸಲು ಯತ್ನಿಸಿದ್ದಾರೆ. ತೀವ್ರವಾಗೊ ಅಸ್ವಸ್ಥಗೊಂಡಿದ್ದ ಯುವಕ ಎಚ್ಚರತಪ್ಪಿದ್ದು, ಈತ ಸತ್ತು ಹೋಗಿದ್ದಾನೆ ಎಂದು ಭಾವಿಸಿ ದುಷ್ಕರ್ಮಿಗಳ ಗುಂಪು ಆತನನ್ನು ಜೀವಂತ ಸಮಾಧಿ ಮಾಡಿ ಪರಾರಿಯಾಗಿದ್ದಾರೆ.
ಮಧ್ಯರಾತ್ರಿ ಹೊತ್ತಿಗೆ ರಕ್ತದ ವಾಸೆಯನ್ನು ಹಿಡಿದು ಬಂದ ಬೀದಿ ನಾಯಿಗಳು ಮಣ್ಣನ್ನು ಅಗೆದು, ಮಣ್ಣಿನಡಿಯಲ್ಲಿದ್ದ ಯುವಕನ ದೇಹವನ್ನು ಎಳೆದಾಡಿ ತಿನ್ನಲು ಯತ್ನಿಸಿದೆ. ಈ ಸಂದರ್ಭದಲ್ಲಿ ಯುವಕನಿಗೆ ಪ್ರಜ್ಞೆ ಬಂದಿದ್ದು, ತಕ್ಷಣ ಅಲ್ಲಿಂದ ಎದ್ದು ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾನೆ. ನಂತರ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಮನೆಯವರನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇದನ್ನೂ ಓದಿ:ಮೊಬೈಲ್​ ಹಾಟ್​​ಸ್ಪಾಟ್​ ಆನ್​ ಮಾಡಲು ನಿರಾಕರಿಸಿದ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ
ಈ ಕುರಿತು ಮಾತನಾಡಿರುವ ಸಂತ್ರಸ್ತ ರೂಪ್​ ಕಿಶೋರ್​, ಜಮೀನು ವಿವಾದ ಸಂಬಂಧ ಜುಲೈ 18ರಂದು ಅರ್ಟೋನಿ ಪ್ರದೇಶದಲ್ಲಿ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವಂತ ಸಮಾಧಿ ಮಾಡಿದ್ದರು. ನಾಯಿಗಳ ಸಹಾಯದಿಂದ ನಾನು ಬದುಕುಳಿದಿದ್ದು, ನನ್ನ ತಾಯಿ ಆರೋಪಿಗಳ ವಿರುದ್ಧ ದೂರನ್ನು ನೀಡಿದ್ದಾರೆ. ಪೊಲೀಸರು ನಮಗೆ ನ್ಯಾಯ ಕೊಡಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಸಂತ್ರಸ್ತ ರೂಪ್​ ಕಿಶೋರ್​ ಹೇಳಿದ್ದಾರೆ.
ರೂಪ್​ ಕಿಶೋರ್​ ನೀಡಿದ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್‌ 109, ಸೆಕ್ಷನ್‌ 115. ಸೆಕ್ಷನ್‌ 351 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೂಪ್​ ಕಿಶೋರ್​ ಬದುಕುಳಿದಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳು ತಲೆಮಾರಿಸಿಕೊಂಡಿದ್ದು, ಪೊಲೀಸರು ಅವರನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
