ಭೋಪಾಲ್​:ಆಸ್ತಿ ಆಸೆ ಎಂತವರನ್ನೂ ಪಾಪಿಗಳನ್ನಾಗಿ ಮಾಡಿಬಿಡುತ್ತದೆ. ಅಣ್ಣ ತಮ್ಮಂದಿರ ಮಧ್ಯೆ ಜಗಳ ಹುಟ್ಟುವುದಕ್ಕೆ ಮುಖ್ಯ ಕಾರಣವೇ ಆಸ್ತಿ. ಈ ಆಸ್ತಿಯ ಕಾರಣದಿಂದಲೇ ಆತ್ಮಹತ್ಯೆಗೆ ಶರಣಾದ ತಮ್ಮನೊಬ್ಬ, ಸಾಯುವುದಕ್ಕೂ ಮುನ್ನ ಅಣ್ಣನ ಕುಟುಂಬವನ್ನೂ ಸಂಪೂರ್ಣವಾಗಿ ನಾಶ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಅಕ್ಕನನ್ನು ಬಿಟ್ಟು ತಮ್ಮನನ್ನು ಮದುವೆಗೆ ಕರೆದೊಯ್ದ ಅಮ್ಮ; ವಾಪಾಸು ಬಂದವಳಿಗೆ ಕಾದಿತ್ತು ಶಾಕ್
ರಾಜ್ಯದ ಅನುಪ್ಪುರ ಜಿಲ್ಲೆಯಲ್ಲಿ ಓಂಕಾರ್​ ವಿಶ್ವಕರ್ಮ (35)ನ ಕುಟುಂಬ, ತಮ್ಮ ದೀಪಕ್​ ವಿಶ್ವಕರ್ಮನೊಂದಿಗೆ ಬದುಕುತ್ತಿತ್ತು. ಇತ್ತೀಚೆಗೆ ಅಣ್ಣ ತಮ್ಮನ ನಡುವೆ ಆಸ್ತಿಯ ವಿಚಾರದಲ್ಲಿ ಜಗಳವಾಗಿದೆ. ಓಂಕಾರ್​ ಸಿಟ್ಟಿನಿಂದ ತಮ್ಮನನ್ನು ಮನೆಯಿಂದ ಹೊರಗೆ ಹಾಕಿದ್ದನಂತೆ. ಅಣ್ಣ ಮನೆಯಿಂದ ಹೊರಗೆ ಹಾಕಿದ್ದಕ್ಕೆ ದ್ವೇಷ ಬೆಳೆಸಿಕೊಂಡ ದೀಪಕ್​ ಗುರುವಾರ ನೇಣಿಗೆ ಶರಣಾಗಿದ್ದಾನೆ.
ನೇಣಿಗೆ ಶರಣಾಗುವ ಮುನ್ನ ತನ್ನ ದ್ವೇಷವನ್ನು ದೀಪಕ್​ ತೀರಿಸಿಕೊಂಡಿದ್ದಾನೆ. ಬುಧವಾರ ರಾತ್ರಿ ಅಣ್ಣನ ಮನೆ ಬಳಿ ಹೋದ ದೀಪಕ್​, ಮನೆಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಅವಘಡದಿಂದಾಗಿ ಓಂಕಾರ್​, ಪತ್ನಿ ಕಸ್ತೂರಿಯಾ (31) ಮತ್ತು ನಾಲ್ಕು ವರ್ಷದ ಮಗ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ಸಹಾಯದಿಂದಾಗಿ 17 ವರ್ಷದ ಮಗಳನ್ನು ಮಾತ್ರವೇ ಬದುಕುಳಿಸಿಕೊಳ್ಳಲಾಗಿದೆ. ಆಸ್ಪತ್ರೆ ಸೇರಿರುವ ಮಗಳ ಸ್ಥಿತಿಯೂ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ವಯಸ್ಕ ಯುವತಿಯರು ಯಾರೊಂದಿಗೆ, ಎಲ್ಲಾದರೂ ಬದುಕಬಹುದು; ದೆಹಲಿ ಹೈ ಕೋರ್ಟ್​ ಮಹತ್ತರ ತೀರ್ಪು
ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್​ನಲ್ಲಿ ಪ್ರಕರಣ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
