ನ್ಯೂಯಾರ್ಕ್​:ವ್ಯಕ್ತಿಯೊಬ್ಬ ದುಬಾರಿ ಬೆಲೆಯ ಬರೋಬ್ಬರಿ 300 ಐಫೋನ್ ಮೊಬೈಲ್​ಗಳನ್ನು ಖರೀದಿಸಿ ಹಿಂತಿರುಗುತ್ತಿದ್ದ. ಈ ವೇಳೆ ಮಾರ್ಗ ಮಧ್ಯೆ ಮೊಬೈಲ್​ಗಳು ದರೋಡೆಯಾಗಿವೆ. ಈ ಘಟನೆ ತಡರಾತ್ರಿ ಹೊತ್ತಿಗೆ ನಡೆದಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ 27 ವರ್ಷದ ವ್ಯಕ್ತಿ, ಮೊಬೈಲ್ ಶೋರೂಂ ವ್ಯವಹಾರ ನಡೆಸುತ್ತಿದ್ದ. ಹೀಗಾಗಿ ತನ್ನ ಅಂಗಡಿಯಲ್ಲಿ ಮಾರಾಟ ಮಾಡುವ ಸಲುವಾಗಿ, ಐಫೋನ್​ ಸ್ಟೋರ್​ಗೆ ತೆರಳಿ, 300 ಮೊಬೈಲ್​ ಫೋನ್​​ಗಳನ್ನು ಖರೀದಿಸಿದ್ದಾನೆ. ಈ ಹಿಂದೆಯೂ ಇದೇ ಪ್ರಮಾಣದಲ್ಲಿ ಮೊಬೈಲ್ ಫೋನ್ ಖರೀದಿಸಿದ್ದರಿಂದಾಗಿ ಈತ ಶೋರೂಂ ಮಂದಿಗೆ ಪರಿಚಿತನಾಗಿದ್ದ.
ಖರೀದಿಯ ನಂತರ ಮೂರು ಬ್ಯಾಗ್​​ಗಳಲ್ಲಿ ಸ್ಮಾರ್ಟ್​​ಫೋನ್​ಗಳನ್ನು ತುಂಬಿಸಿಕೊಂಡು ತನ್ನ ಕಾರಿನತ್ತ ಹಿಂತಿರುಗಿದ್ದಾನೆ. ಈ ವೇಳೆ ಇಬ್ಬರು ಅಡ್ಡಗಡ್ಡಿ, ಲಕ್ಷಾಂತರ ಬೆಲೆ ಬಾಳುವ ಮೊಬೈಲ್ ಫೋನ್​ಗಳನ್ನು ದರೋಡೆ ಮಾಡಲು ಯತ್ನಿಸಿದ್ದಾರೆ.
ವ್ಯಕ್ತಿಯಿಂದ ಬಲವಂತವಾಗಿ ಮೊಬೈಲ್ ಫೋನ್​ಗಳನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ಹೊಡೆದಾಟ ನಡೆದಿದ್ದು, ಖದೀಮರು ವ್ಯಕ್ತಿಯ ಮುಖಕ್ಕೆ ಹಲ್ಲೆ ಮಾಡಿದ್ದಾರೆ. ನಂತರ ಮೂರರಲ್ಲಿ ಒಂದು ಚೀಲವನ್ನು ದರೋಡೆ ಮಾಡಿದ್ದಾರೆ. ಇದರಿಂದ 125 ಐಫೋನ್​ ಮೊಬೈಲ್​ಗಳು ದರೋಡೆಯಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
