ಜೈಪುರ:ಅಕ್ರಮ ಸಂಬಂಧಗಳು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಪೂರ್ತಿ ಕುಟುಂಬವನ್ನೇ ಹಾಳು ಮಾಡಿಬಿಡುತ್ತದೆ ಎನ್ನುತ್ತಾರೆ. ಅದೇ ರೀತಿ ಅಕ್ರಮ ಸಂಬಂಧವನ್ನು ಹೊಂದಿದ್ದ ಮಹಿಳೆಯೊಬ್ಬಳು ತನ್ನ ಜೀವನದ ಜತೆ ಕುಟುಂಬವನ್ನೇ ಹಾಳು ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಇದನ್ನೂ ಓದಿ:ಮೊಮ್ಮಗಳೊಂದಿಗಿನ ಸ್ನೇಹವನ್ನು ಪ್ರಶ್ನಿಸಿದ್ದಕ್ಕೆ ಅಜ್ಜಿಯ ಕಥೆಯನ್ನೇ ಮುಗಿಸಿಬಿಟ್ಟ! ಲವ್​ ಜಿಹಾದ್​ಗೆ ಅಜ್ಜಿ, ಮೊಮ್ಮಗ ಬಲಿ?
ರಾಜಸ್ಥಾನದ ಜಲಾವರ್​ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. 41 ವರ್ಷದ ಗುಡ್ಡಿನ ಬಾಯಿಯ ಪತಿ ಮಾನಸಿಕ ಅಸ್ವಸ್ಥ. ಆತನಿಂದ ತನಗೆ ಸುಖವಿಲ್ಲ ಎಂದು ನಿರ್ಧರಿಸಿದ ಗುಡ್ಡಿ ಸೋನು ಮಾಲಿ ಹೆಸರಿನ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಚಾರ ಆಕೆಯ ಗಂಡನ ತಮ್ಮನಿಗೆ ಗೊತ್ತಾಗಿದೆ. ಅತ್ತಿಗೆ ಅಕ್ರಮ ಸಂಬಂಧ ನಡೆಸುತ್ತಿದ್ದಾರೆ. ನೀನು ಆಕೆಗೆ ಬೈದು, ಸರಿ ಮಾಡು ಎಂದು ಆತ ಅಣ್ಣನಿಗೆ ಹೇಳಿಕೊಟ್ಟಿದ್ದಾನೆ. ಇದರಿಂದ ಸಿಟ್ಟಿಗೆದ್ದ ಗುಡ್ಡಿ ಮೈದುನನ ಪ್ರಾಣವನ್ನೇ ತೆಗೆಯಲು ನಿರ್ಧರಿಸಿದ್ದಾಳೆ.
ಇದನ್ನೂ ಓದಿ:ಕೃಷಿ ಕಾಯ್ದೆಯ ಅಪನಂಬಿಕೆಗಳನ್ನು ತೆಗೆದುಹಾಕಲು ಮುಂದಾದ ಬಿಜೆಪಿ! ದೇಶಾದ್ಯಂತ 700 ಸುದ್ದಿಗೋಷ್ಠಿ
ಗುಡ್ಡಿ, ಆಕೆಯ ಕೆಲಸಗಾರ ಶ್ಯಾಮ್​ ಭೀಮ್​ (30) ಮತ್ತು ಸೋನು ಮೂವರು ಸೇರಿಕೊಂಡು ಮೈದುನನ್ನು ಗದ್ದೆಗೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಗದ್ದೆಯಲ್ಲಿದ್ದ ಬಾವಿಗೆ ಹೆಣವನ್ನು ಎಸೆದಿದ್ದಾರೆ. ಶವದಲ್ಲಿ ಗಾಯಕ ಕಲೆಗಳಿದ್ದಿದ್ದರಿಂದಾಗಿ ಪೊಲೀಸರು ವಿಚಾರಣೆ ನಡೆಸಿದ್ದು ನಿಜಾಂಶ ಹೊರಬಿದ್ದಿದೆ. ಗುಡ್ಡಿ ಮತ್ತು ಶ್ಯಾಮ್​ನನ್ನು ಪೊಲೀಸರು ಬಂಧಿಸಿದ್ದಾರೆ. ಸೋನುಗಾಗಿ ಹುಡುಕಾಟ ನಡೆಸಲಾಗುತ್ತಿದೆ. (ಏಜೆನ್ಸೀಸ್​)
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

‘ಬೇಗ ಸಾಯ್ಬೇಕಾ? ಹಾಗಾದರೆ ನೇಣು ಹಾಕ್ಕೋ!’ ವಿಡಿಯೋ ಕಾಲ್​ನಲ್ಲೇ ಪ್ರಿಯತಮೆಯನ್ನು ಕೊಂದ ಪ್ರೇಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
