ರಾಜಸ್ಥಾನ:ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಬೇರೆಯವರನ್ನು ಮದುವೆಯಾಗಿದ್ದರೂ ಅವಳನ್ನು ನೋಡಲು ತಡರಾತ್ರಿಯಲ್ಲಿ ಹೋಗಿ, ಅವಳೊಂದಿಗೆ ಮಾತನಾಡಿ, ಆಕೆಯನ್ನು ಅಪ್ಪಿಕೊಂಡ ಕೆಲವೇ ಕ್ಷಣಗಳಲ್ಲಿ ಪ್ರಾಣ ಕಳೆದುಕೊಂಡಂತಹ ಅಪರೂಪದ ಪ್ರಕರಣವೊಂದು ನಡೆದಿದೆ.
ರಾಜಸ್ಥಾನದ ಭರತ್​ಪುರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಪ್ರಿಯಕರ ಚಂದ್ರಪಾಲ್​ (22) ಸಾವಿಗೀಡಾದ ವ್ಯಕ್ತಿ. ಇಕರಾನ್​ನ ನಿವಾಸಿಯಾಗಿದ್ದ ಈತ ತನ್ನ ಪ್ರೇಯಸಿ ಬೇರೆಯವರನ್ನು ಮದುವೆಯಾಗಿದ್ದರೂ ಆಕೆ ಆಸ್ಪತ್ರೆಯಲ್ಲಿರುವಾಗ ತಡರಾತ್ರಿಯಲ್ಲಿ ಅವಳಿದ್ದಲ್ಲಿಗೆ ತೆರಳಿ ಭೇಟಿಯಾಗುವ ಸಾಹಸವನ್ನು ಮಾಡಿದ್ದಾನೆ. ಬುಧವಾರ ಬೆಳಗಿನ ಜಾವ 2.30ರ ಸಮಯದಲ್ಲಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ.
ಆಸ್ಪತ್ರೆಯ ಐದನೇ ಮಹಡಿಯಲ್ಲಿದ್ದ ತನ್ನ ಪ್ರೇಯಸಿಯನ್ನು ಭೇಟಿ ಮಾಡಿದ ಚಂದ್ರಪಾಲ್, ಆಕೆಯೊಂದಿಗೆ ಸ್ವಲ್ಪ ಹೊತ್ತಿನಲ್ಲಿ ಮಾತನಾಡಿದ್ದು, ಬಳಿಕ ಅವಳನ್ನು ಅಪ್ಪಿಕೊಂಡಿದ್ದು, ನಂತರ ಅವಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟು ಆರನೇ ಮಹಡಿಗೆ ಹೋಗಿದ್ದವ ಅಲ್ಲಿಂದ ಕೆಳಕ್ಕೆ ಬಿದ್ದು ಪ್ರಾಣ ಬಿಟ್ಟಿದ್ದಾನೆ. ಆರಂಭದಲ್ಲಿ ಅಕಸ್ಮಾತ್ ಆಗಿ ಕೆಳಕ್ಕೆ ಬಿದ್ದ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಬಳಿಕ ಸಿಸಿಟಿವಿ ಕ್ಲಿಪ್ಪಿಂಗ್ ನೋಡಿದಾಗ ಆತ ಮಾಡಿದ್ದೆಲ್ಲವೂ ಅದರಲ್ಲಿ ದಾಖಲಾಗಿದ್ದು, ಆತನೇ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ಕಾರಣ ಹುಡುಕುವ ಯತ್ನದಲ್ಲಿದ್ದಾರೆ.
ಇಬ್ಬರೂ ಇದಕ್ಕೂ ಮೊದಲು ಅಪ್ನಾ ಘರ್ ಎಂಬ ಆಶ್ರಮವೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಇವರಿಬ್ಬರ ಪ್ರೇಮಪ್ರಕರಣ ಬಯಲಾಗಿ ಅಲ್ಲಿಂದ ಹೊರಹಾಕಿದ್ದರು ಎಂಬುದು ವಿವಾಹಿತೆಯನ್ನು ವಿಚಾರಣೆಗೆ ಒಳಪಡಿಸಿದಾಗ ತಿಳಿದುಬಂದಿದೆ. ಆದರೆ ಆತ ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದುಕ್ಕೆ ನಿಖರವಾದ ಕಾರಣ ಖಚಿತವಾಗಿ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಂಸಾರ ನಿಭಾಯಿಸಲಿಕ್ಕೂ ಇಲ್ಲಿದೆ ಒಂದು ಕೋರ್ಸ್​; ಮದುವೆ ಆಗುವವರಿಗೂ-ಆದವರಿಗೂ ನೀಡ್ತಾರೆ ತರಬೇತಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
