ಕೋಲ್ಕತ್ತಾ:ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ತನ್ನ ಐದು ತಿಂಗಳ ಮಗುವಿನ ಶವವನ್ನು ಚೀಲದಲ್ಲಿಟ್ಟುಕೊಂಡು ಸಾರ್ವಜನಿಕ ಬಸ್‌ನಲ್ಲಿ 200 ಕಿಲೋಮೀಟರ್ ಪ್ರಯಾಣಿಸಿದ್ದೇನೆ ಎಂದು ವ್ಯಕ್ತಿಯೊಬ್ಬ ಭಾನುವಾರ ಹೇಳಿಕೊಂಡಿದ್ದಾನೆ. ತನ್ನಲ್ಲಿ ಸಿಲಿಗುರಿಯಿಂದ ಕಲಿಯಗಂಜ್‌ನಲ್ಲಿರುವ ಮನೆಗೆ ಶವವನ್ನು ಸಾಗಿಸಲು ಆಂಬ್ಯುಲೆನ್ಸ್ ವೆಚ್ಚ ಭರಿಸಲು 8,000 ರೂ. ಇಲ್ಲದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ ಸರ್ಕಾರದ ‘ಸ್ವಾಸ್ಥ್ಯ ಸತಿ’ ಆರೋಗ್ಯ ವಿಮಾ ಯೋಜನೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದು, ಮಗುವಿನ ದುರದೃಷ್ಟಕರ ಸಾವಿನ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಟಿಎಂಸಿ ಆರೋಪಿಸಿದೆ.
“ಆರು ದಿನಗಳ ಕಾಲ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ನನ್ನ ಐದು ತಿಂಗಳ ಮಗ ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ. ಈ ಸಮಯದಲ್ಲಿ ನಾನು 16,000 ರೂ. ಮಾಡಿದ್ದೆ. ಆದರೆ ನನ್ನ ಮಗುವನ್ನು ಕಲಿಯಗಂಜ್‌ಗೆ ಸಾಗಿಸಲು ಅಲ್ಲಿನ ಆಂಬ್ಯುಲೆನ್ಸ್ ಡ್ರೈವರ್ ಬೇಡಿಕೆ ಇಟ್ಟಿದ್ದ 8,000 ರೂ. ಪಾವತಿಸಲು ನನ್ನ ಬಳಿ ಹಣವಿರಲಿಲ್ಲ” ಎಂದು ತಂದೆ ದೇವ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.
ದೇವ್​ಶರ್ಮಾ ಮೃತದೇಹವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಗಂಜ್‌ಗೆ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರಿಗೆ ತಿಳಿದರೆ ತನ್ನನ್ನು ಬಸ್​ನಿಂದ ಹೊರಹಾಕುವ ಭಯದಿಂದ ಯಾರಿಗೂ ತಿಳಿಸದೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.
102 ಯೋಜನೆಯಡಿ ಅಂಬ್ಯುಲೆನ್ಸ್ ಚಾಲಕರು, ರೋಗಿಗಳಿಗೆ ಈ ಸೌಲಭ್ಯ ಉಚಿತವಾಗಿದೆ. ಆದರೆ ಶವಗಳನ್ನು ಸಾಗಿಸಲು ಹಣ ಪಾವತಿಸಬೇಕು ಎಂದು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡುವ ವ್ಯಕ್ತಿಯ ವೀಡಿಯೊಗಳೊಂದಿಗೆ ವಿಷಯವನ್ನು ಟ್ವಿಟ್ ಮಾಡಿದ ಅಧಿಕಾರಿ ಹೀಗೆ ಬರೆದಿದ್ದಾರೆ: “ನಾವು ತಾಂತ್ರಿಕ ವಿಚಾರಗಳನ್ನು ನೋಡಬಾರದು. ಸ್ವಾಸ್ಥ್ಯ ಸತಿ ಯೋಜನೆ ಸಾಧಿಸಿರುವುದು ಏನನ್ನು? ದುರದೃಷ್ಟವಶಾತ್ ಆಗಿ ಇದು ‘ಎಗಿಯೆ ಬಾಂಗ್ಲಾ’ (ಸುಧಾರಿತ ಬಂಗಾಳ) ಮಾದರಿಯ ನಿಜವಾದ ಚಿತ್ರಣವಾಗಿದೆ.” ಎಂದು ವಾಗ್ದಾಳಿ ನಡೆಸಿದರು. ಮಗುವಿನ ದುರದೃಷ್ಟಕರ ಸಾವಿನೊಂದಿಗೆ ಬಿಜೆಪಿ “ಕೊಳಕು ರಾಜಕೀಯ” ಮಾಡಲು ಪ್ರಯತ್ನಿಸುತ್ತಿದೆ ಎಂದು ಟಿಎಂಸಿ ರಾಜ್ಯಸಭಾ ಸಂಸದ ಸಂತಾನು ಸೇನ್ ಆರೋಪಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
