ಲಖನೌ:ಅನಾರೋಗ್ಯದಿಂದ ಬಳಲುತ್ತಿದ್ದ 19 ವರ್ಷದ ಮಗಳನ್ನು ತಂದೆ ಬೈಕ್​ನಲ್ಲೇ ಆಸ್ಪತ್ರೆಗೆ ಕರೆದೊಯ್ದು ಅದಾದ ನಂತರ ಅದೇ ಬೈಕ್​ನಲ್ಲಿ ಆಕೆಯ ಶವವನ್ನು ವಾಪಾಸು ತೆಗೆದುಕೊಂಡು ಬಂದಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ.
ಫಿರೋಜಾನಾದ್​ನ ತುಂಡ್ಲಾದ ಜಾರೌಲಿ ಕಲಾ ಗ್ರಾಮದ ಶಿವನಾರಾಯಣ ಅವರ ಮಗಳು ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಇದ್ದಕ್ಕಿದ್ದಂತೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ತಂದೆ ಅವಳನ್ನು ಬೈಕ್​ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ನಮ್ಮಲ್ಲಿ ಆಕ್ಸಿಜನ್​ ಇಲ್ಲ ಹಾಗಾಗಿ ಆಕ್ಸಿಜನ್​ ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅದಾಗಲೇ ಗಂಭೀರ ಸ್ಥಿತಿಗೆ ಹೋಗಿದ್ದ ಮಗಳು ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಸರ್ಕಾರಿ ಆಸ್ಪತ್ರೆಗಳ ನಿಯಮದ ಪ್ರಕಾರ, ಶವವನ್ನು ಆ್ಯಂಬುಲೆನ್ಸ್​ನಲ್ಲಿ ಅಥವಾ ಬೇರೆ ಗಾಡಿಯಲ್ಲಿ ಕಳುಹಿಸಿಕೊಡಬೇಕು. ಆದರೆ ಅದಕ್ಕೂ ಗಾಡಿ ಇಲ್ಲದಿರುವುದಾಗಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ನಂತರ ಮಗಳ ಮೃತ ದೇಹವನ್ನು ತಂದೆ ಬೈಕ್​ನಲ್ಲೇ ವಾಪಾಸು ತಂದಿದ್ದಾನೆ. ಇದೀಗ ಪೂರ್ತಿ ಕುಟುಂಬ ಕಣ್ಣೀರು ಹಾಕುತ್ತಿದೆ. (ಏಜೆನ್ಸೀಸ್​)
ಒಂದೇ ಆ್ಯಂಬುಲೆನ್ಸ್​ನೊಳಗೆ 22 ಕರೊನಾ ಸೋಂಕಿತರ ಹೆಣ! ವಿಡಿಯೋ ಮಾಡಲು ಬಿಡದೆ ಮೊಬೈಲ್​ ಕಿತ್ತುಕೊಂಡ ಪೊಲೀಸರು

ಕರೊನಾ ಜತೆ ಹೋರಾಡಿದೆವು, ಒಟ್ಟಿಗೆ ಜಯಿಸಿದೆವು!; ನಿಟ್ಟುಸಿರು ಬಿಟ್ಟ ಕೃಷ್ಣ- ಮಿಲನಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 9 =
Remember me
