ಅಹಮದಾಬಾದ್​:ಹಾಡಹಗಲೇ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಆಕೆಯ ಶವವನ್ನು ಸ್ಕೂಟರ್​ ಮೇಲಿಟ್ಟುಕೊಂಡು ಸುಮಾರು 10 ಕಿ.ಮೀ ವರೆಗೆ ಸವಾರಿ ಮಾಡಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.
ಘಟನೆಯು ಗುಜರಾತಿನ ಪಲಿಟನಾ ಪಟ್ಟಣದ ಬಳಿಯಿರುವ ಗ್ರಾಮದ ಬಳಿ ಕಳೆದ ಭಾನುವಾರ ನಡೆದಿದೆ. ಆರೋಪಿ ಅಮಿತ್​ ಹೆಮ್ನಾನಿ ಪತ್ನಿಯ ಶವವನ್ನು ಸ್ಕೂಟರ್​ನಲ್ಲಿಟ್ಟುಕೊಂಡು ಹೋಗುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸಲು ನೆರವಾಗಿದ್ದಾರೆ.
ಇದನ್ನೂ ಓದಿ:ಹೊಸದೊಂದು ದಾಖಲೆ ನಿರ್ಮಿಸುವುದಕ್ಕೆ ತಯಾರಾಗುತ್ತಿದೆ ‘ಡಿಡಿಎಲ್​ಜೆ’ …
ಅಮಿತ್​ ವರ್ಷದ ಹಿಂದಷ್ಟೇ ನೈನಾ ಎಂಬಾಕೆಯನ್ನು ಮದುವೆಯಾಗಿದ್ದ. ಕ್ಲುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತಾರಕಕ್ಕೇರಿಸಿದ ಗಲಾಟೆಯಿಂದ ನಿಯಂತ್ರಣ ಕಳೆದುಕೊಂಡು ಅಮಿತ್​, ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಸ್ಕೂಟರ್​ನಲ್ಲಿ ಹಾಕಿಕೊಂಡು ತೆರಳಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತ್ನಿಯ ಶವವನ್ನು ಅರಣ್ಯ ಪ್ರದೇಶದ ಬಳಿ ಎಸೆದುಬರಲು ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ಆರೋಪಿ ಅಮಿತ್​, ಪೊಲೀಸ್​ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.(ಏಜೆನ್ಸೀಸ್​)
ಪಶ್ಚಿಮ ಬಂಗಾಳವೂ ನಮ್ಮದೇ; ಮಮತಾ ವಿರುದ್ಧ 200 ಸೀಟು ಗೆಲ್ಲುತ್ತೇವೆಂದ ಅಮಿತ್​ ಷಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
