ಕೋಲ್ಕತ:ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ಸಮಾವೇಶಕ್ಕೆ ವ್ಯಕ್ತಿಯೊಬ್ಬ ಪರವಾನಗಿ ಹೊಂದಿದ್ದ ಗನ್​ ತೆಗೆದುಕೊಂಡು ಒಳಪ್ರವೇಶಿಸಲು ಯತ್ನಿಸಿದ್ದ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ವ್ಯಕ್ತಿಯನ್ನು ಸ್ವಯಂಸೇವಕರು ಹಾಗೂ ಪೊಲೀಸರು ತಡೆದು ವಾಪಸ್​ ಕಳುಹಿಸಿದರು ಎಂದು ತಿಳಿದುಬಂದಿದೆ. ವ್ಯಕ್ತಿಯನ್ನು ದುರ್ಗಾಪುರದ ಮಾಜಿ ಸಿಎಪಿಎಫ್​ ಸಿಬ್ಬಂದಿ ಜಡು ನ್ಯಾಂಡಿ ಎಂದು ಗುರುತಿಸಲಾಗಿದ್ದು, ಈ ವೇಳೆ ತಾನೂಬ್ಬ ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡಿದ್ದಾನೆ.
ಸಮಾವೇಶ ಸ್ಥಳದಲ್ಲಿನ ವಿಐಪಿ ಪ್ರವೇಶ ದ್ವಾರದ ಮೂಲಕ ಪ್ರವೇಶಿಸಲು ಯತ್ನಿಸಿದ್ದಾನೆ. ರಕ್ಷಣಾತ್ಮಕ ಕಾರಣಗಳಿಂದ ಗನ್​ ತಂದಿದ್ದ ಎಂದು ತಿಳಿದುಬಂದಿದೆ.
ಅಮಿತ್​ ಷಾ ಅವರು ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದು, ಇಂದು ಕೋಲ್ಕತಗೆ ಬಂದಿಳಿದಿದ್ದಾರೆ. ಕೋಲ್ಕತ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಬಿಜೆಪಿ ನಾಯಕರು ಬರಮಾಡಿಕೊಂಡರು. ಮೊದಲು ರಾಜರ್ಹತ್​ನಲ್ಲಿನ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(ಎನ್​ಎಸ್​ಜಿ)ಯ 29 ವಿಶೇಷ ಸಂಯೋಜಿತ ಗುಂಪು ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಮಿತ್​ ಷಾ ಭಾಗವಹಿಸಿದರು. ಬಳಿಕ ಸಿಎಎ ಪರ ನಡೆದ ಸಮಾವೇಶದಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಸಿಎಎ ವಿರೋಧಿ ಪ್ರತಿಭಟಕಾರರು ಅಮಿತ್​ ಷಾ ವಿರುದ್ಧ ಗೋ ಬ್ಯಾಕ್​ ಘೋಷಣೆ ಕೂಗಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 5 =
Remember me
