ಗುರುಗಾಂವ್​:ಟ್ರಾಫಿಕ್ ಜಾಮ್​ ಕಿರಿಕಿರಿ ಮತ್ತು ಬೋರ್​ ಹೊಡೆಸಬಹುದು. ಆದರೆ ಈ ಮನುಷ್ಯನಿಗೆ ಯಾವುದೂ ನೀರಸ ಅಲ್ಲ. ಗುರುಗ್ರಾಮ್​ನಲ್ಲಿ ಟ್ರಾಫಿಕ್​ ಜಾಮ್​ ಆದಾಗ ಈ ವ್ಯಕ್ತಿ ಸಮಯವನ್ನು ಹಾಳು ಮಾಡದೇ ಮದ್ಯಪಾನ ಮಾಡಲು ಶುರು ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಕಾರಿನ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಕ್ಲಿಪ್‌ನಲ್ಲಿ ಪ್ರಯಾಣಿಕರ ಸೀಟಿನಲ್ಲಿರುವ ವ್ಯಕ್ತಿಯೊಬ್ಬ ಖಾಲಿ ಗ್ಲಾಸನ್ನು ಹಿಡಿದು ಕಾರಿನ ಛಾವಣಿಯ ಮೇಲೆ ಕುಳಿತಿರುವವರಿಗೆ ರವಾನಿಸುವುದನ್ನು ಕಾಣಬಹುದು. ಆತ ತನ್ನ ಲೋಟವನ್ನು ಹಿಡಿದು ಮದ್ಯದ ಬಾಟಲಿಯಂತೆ ಕಾಣುವ ಬಾಟಲಿಯನ್ನು ಬಗ್ಗಿಸುತ್ತಿದ್ದಾನೆ. ಮತ್ತೊಂದೆಡೆ, ಕೆಲವು ನೋಡುಗರು ಘಟನೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರೆ, ಇತರರು ಆಶ್ಚರ್ಯಚಕಿತರಾದರು. ವೈರಲ್ ಆಗಿರುವ ಟ್ವೀಟ್​ನಲ್ಲಿ “ಇದು ಗುರುಗಾವ್‌ನಲ್ಲಿ ಮಾತ್ರ ಸಂಭವಿಸಬಹುದು” ಎಂದು ಬರೆಯಲಾಗಿದೆ.
ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಾಗಿನಿಂದ ಅದು 7.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಸಾರ್ವಜನಿಕವಾಗಿ ಉಪದ್ರವವನ್ನು ಮಾಡಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಕ್ತಿಯನ್ನು ದೂಷಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು, “ಇದು ತಮಾಷೆಯಲ್ಲ” ಎಂದು ಬರೆದಿದ್ದಾರೆ. ಒಂದು ಕಾಮೆಂಟ್‌ನಲ್ಲಿ, “ಒಮ್ಮೆ ಪೊಲೀಸರು ಆ ವ್ಯಕ್ತಿಯನ್ನು ಹೊಡೆದರೆ ನಂತರ ಎಲ್ಲಾ ಅಮಲು ಇಳಿಯುತ್ತದೆ” ಎಂದು ಬರೆಯಲಾಗಿದೆ.(ಏಜೆನ್ಸೀಸ್)


A post shared by RTG2😃 (@20degreecelsius)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
