ಮುಂಬೈ:ವ್ಯಕ್ತಿಯೊರ್ವ ಏಳು ಮಕ್ಕಳೊಂದಿಗೆ ಸ್ಕೂಟಿ ಸವಾರಿ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.ಇದನ್ನೂ ಓದಿ:ಲಂಡನ್ ನಗರದಲ್ಲಿ ಭಾರತೀಯ ಮನಃಶಾಸ್ತ್ರಜ್ಞ ಅಂದರ್! ಈತ ಹೆಸರಿಗಷ್ಟೇ ಡಾಕ್ಟರ್…ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟ್ವಿಟರ್ ಬಳಕೆದಾರನೊಬ್ಬ ಈ ಕುರಿತಾದ ವಿಡಿಯೋವೊಂದನ್ನು ಪೋಸ್ಟ್​​ ಮಾಡಿ, ಈ ಬೇಜವಾಬ್ದಾರಿ ವ್ಯಕ್ತಿ ಸ್ಕೂಟರ್‌ನಲ್ಲಿ ಏಳು ಮಕ್ಕಳೊಂದಿಗೆ ಸವಾರಿ ಮಾಡುತ್ತಿದ್ದಾನೆ. ಏಳು ಪುಟ್ಟ ಮಕ್ಕಳ ಪ್ರಾಣಕ್ಕೆ ಅಪಾಯ ತಂದಿರುವ ಆತನನ್ನು ಕೂಡಲೇ ಬಂಧಿಸಬೇಕು. ಈ ಮಕ್ಕಳ ಪೋಷಕರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಟ್ವೀಟ್​​ ಮಾಡಿದ್ದರು.ಇದನ್ನು ಗಂಭೀರವಾಗಿ ತೆಗೆದುಕೊಂಡ ಮುಂಬೈ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಗುರುತನ್ನು ಬಹಿರಂಗಪಡಿಸದೇ, ಅದೇ ಸ್ಕೂಟರ್‌ನಲ್ಲಿ ಸವಾರನ ಮುಖವನ್ನು ಮಾರ್ಫಿಂಗ್ ಮಾಡಿದ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.ಇದನ್ನೂ ಓದಿ:ಭಾರೀ ಮಳೆಗೆ ಬಿದ್ದ ಮದುವೆ ಮನೆ ಪೆಂಡಲ್​​; 8 ಮಂದಿ ಸ್ಥಿತಿ ಗಂಭೀರಜತೆಗೆ, 40 ವರ್ಷದ ಆರೋಪಿಯು ಹಿಂಬದಿಯ ಸವಾರರ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿದ್ದು, ಆತನ ವಿರುದ್ಧ ನರಹತ್ಯೆಗೆ ಯತ್ನಿಸಿದ್ದಕ್ಕಾಗಿ ಯು/ಸೆಕ್ಷನ್ 308 ಐಪಿಸಿ ಅಡಿಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
